ಕುಂಬಳೆ ಪಂಚಾಯತ್ ಖಾತೆಯಿಂದ ಹಣ ವಂಚನೆ: ಪಂ. ಅಧ್ಯಕ್ಷೆ ರಾಜೀನಾಮೆ ಒತ್ತಾಯಿಸಿ ಬಿಜೆಪಿ ಮಾರ್ಚ್
ಕುಂಬಳೆ: ಕುಂಬಳೆ ಪಂಚಾಯತ್ನ ಖಾತೆಯಿಂದ 11 ಲಕ್ಷ ರೂಪಾಯಿ ವಂಚನೆ ನಡೆಸಿದ ಪ್ರಕರಣದ ನೈತಿಕ ಹೊಣೆ ಹೊತ್ತು ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನಿನ್ನೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಯಿತು. ಬದಿಯಡ್ಕ ರಸ್ತೆಯಿಂದ ಮಾರ್ಚ್ ಆರಂಭಗೊಂಡಿದ್ದು, ಪಂಚಾಯತ್ ಕಚೇರಿ ಗೇಟ್ ಸಮೀಪ ಅದಕ್ಕೆ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಅಲ್ಪ ನೂಕುನುಗ್ಗಲು ಸೃಷ್ಟಿಯಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮಾರ್ಚ್ ಉದ್ಘಾಟಿಸಿದರು. ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ನೇತಾರರಾದ ಮೋಹನ ಬಂಬ್ರಾಣ,ವಿಜಯ ಕುಮಾರ್ ರೈ, ಸುರೇಶ್ ಕುಮಾರ್, ಪ್ರದೀಪ್ ಶೆಟ್ಟಿ, ಎ.ಕೆ. ಕಯ್ಯಾರ್, ಅವಿನಾಶ್ ಕಾರಂತ್ ಮೊದಲಾದ ವರು ಮಾತನಾಡಿದರು.