ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಂಘದಲ್ಲಿ ಒಬ್ಬರಿಗೆ 13 ಖಾತೆಗಳು: 40ರಷ್ಟು ಮಂದಿಗೆ 5ಕ್ಕೂ ಹೆಚ್ಚು ಖಾತೆಗಳು; ಇ.ಡಿ ತನಿಖೆ ಸಾಧ್ಯತೆ


ಕುಂಬಳೆ: ಒಂದು ಬ್ಯಾಂಕ್ನಲ್ಲಿ ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಎಷ್ಟು ಖಾತೆಗಳಿರಬಹುದು? ಒಂದು ಖಾತೆಯಿರುವುದು ಸ್ವಾಭಾವಿಕ. ಆದರೆ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲಿ ಮುಹಮ್ಮದ್ ಹಾಜಿ ಎಂಬವರ ಹೆಸರಲ್ಲಿ 13 ಡೈಲಿ ಡೆಪಾಸಿಟ್ ಅಕೌಂಟ್ಗಳಿರುವುದನ್ನು ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಅದೇ ರೀತಿ ಶಾಹುಲ್ ಹಮೀದ್ರ ಹೆಸರಲ್ಲಿ ಎಂಟು ಖಾತೆಗಳು, ಕೆ.ಎಂ. ಮುಹಮ್ಮದ್ರ ಹೆಸರಲ್ಲಿ 12 ಖಾತೆಗಳು, ಕೆ.ಎಂ. ಮುಹಮ್ಮದ್ ಶಾಹಿದ್ರ ಹೆಸರಲ್ಲಿ 10 ಖಾತೆಗಳಿರುವುದನ್ನು ಪತ್ತೆಹಚ್ಚಲಾಗಿದೆಯೆಂದು ಸಂಘದ ಆಡಳಿತ ಸಮಿತಿ ಸದಸ್ಯರಾದವರಿಗೆ ಸಹಕಾರಿ ಇಲಾಖೆ ತಿಳಿಸಿದೆ. ಇದೇ ವೇಳೆ ಐದರಿಂದ ಎಂಟರ ಮಧ್ಯೆ ದಿನಠೇವಣಿ ಖಾತೆಗಳಿರುವ 36ರಷ್ಟು ಮಂದಿ ಬೇರೆಯೂ ಇದ್ದಾರೆಂದು ಆಡಳಿತ ಸಮಿತಿ ಸದಸ್ಯರು ತಿಳಿಸುತ್ತಿದ್ದಾರೆ. ಒಬ್ಬನಿಗೆ ಸಹಕಾರಿ ಸಂಘದಲ್ಲಿ 13ರಷ್ಟು ದಿನ ಠೇವಣಿ ಖಾತೆಗಳು ಯಾಕಾಗಿ ಇವೆ ಎಂಬ ಸಂಶಯ ಅಧಿಕಾರಿಗಳಿಗೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆಗೆ ದಾರಿ ಮಾಡಿಕೊಟ್ಟಿದೆ.
ಸಹಕಾರಿ ಇಲಾಖೆಯ ತನಿಖೆಯಲ್ಲಿ ಸಮಸ್ಯೆಗಳು ಕಂಡು ಬಂದಿವೆಯಾದರೂ ಪತ್ತೆಹಚ್ಚುವಿಕೆ ಪೂರ್ಣಗೊಂಡಿಲ್ಲವೆAದು ಸಂಶಯವುAಟಾಗಿದೆ. ಈ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಒಬ್ಬನ ಹೆಸರಲ್ಲಿರುವ ಹಲವು ಖಾತೆಗಳ ಮೂಲಕ ಸಹಕಾರಿ ಸಂಘಕ್ಕೆ ತಲುಪುತ್ತದೆ. ಸಹಕಾರಿ ಬ್ಯಾಂಕ್ನಿAದ ಠೇವಣಿದಾರರು ಹಿಂಪಡೆಯುವ ಹಣದ ಲೆಕ್ಕದ ಕುರಿತು ಆದಾಯ ತೆರಿಗೆ ಇಲಾಖೆಗೋ, ಜಿಎಸ್ಟಿಗೆ ಲಭಿಸದಿರುವುದರಿಂದ ಕಾನೂನು ರೀತಿಯಲ್ಲಿ ಆ ಖಾತೆಗಳಿಗೆ ಹಲವು ವರ್ಷಗಳಿಂದ ತೆರಿಗೆ ರೂಪದಲ್ಲಿ ಲಭಿಸಬೇಕಾದ ಕೋಟ್ಯಂತರ ರೂಪಾಯಿಗಳು ನಷ್ಟಗೊಂಡಿದೆ ಯೆಂದೂ ಅದಕ್ಕೆ ಕಾರಣ ಸಂಘದಲ್ಲಿ ಇಂತಹ ಖಾತೆಗಳಾಗಿವೆ ಎಂದು ಆರೋಪವುಂಟಾಗಿದೆ. ಈ ಹಿನ್ನೆಲೆಯಲ್ಲಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ಸಾಧ್ಯತೆ ಹೆಚ್ಚಿದೆ.
ಆದಿತ್ಯವಾರ ಸಹಿತ ಪ್ರತಿದಿನ ಈ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಠೇವಣಿ ಎಲ್ಲಿಂದ ಬರುತ್ತದೆ, ಹಿಂಪಡೆಯುವ ಹಣ ಎಲ್ಲಿಗೆ ಹೋಗುತ್ತದೆ ಎಂಬ ಕುರಿತು ತನಿಖೆ ನಡೆಯಬೇಕಾಗಿದೆ. ಸಹಕಾರಿ ಸಂಘಗಳು ಬಡ ಗ್ರಾಮೀಣರ ಬ್ಯಾಂಕ್ ಆಗಿದೆಯೆಂದೂ ಅಲ್ಲಿ ವಂಚನೆ, ಕಾನೂನು ವಿರುದ್ಧ ಚಟುವಟಿಕೆಗಳು ನಡೆಯುವ ಸಾಧ್ಯತೆ ಕಡಿಮೆ ಎಂಬ ನಂಬಿಕೆ ಮೇರೆಗೆ ಇಂತಹ ಸಂಸ್ಥೆಗಳ ವ್ಯವಹಾರಗಳು ಆದಾಯತೆರಿಗೆ ಹಾಗೂ ಜಿಎಸ್ಟಿ ತನಿಖಾ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ. ರಾಜ್ಯದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಸಹಕಾರಿ ಸಂಘ ವಂಚನೆಗಳ ಹಿನ್ನೆಲೆಯಲ್ಲಿ ಜನರಿಗಿರುವ ಉತ್ತಮ ನಂಬಿಕೆ ಸುಳ್ಳು ಎಂಬ ಮಟ್ಟಿಗೆ ಈ ಖಾತೆಗಳು ಬದಲಾಗಿವೆ ಎನ್ನಲಾಗುತ್ತಿದೆ.
ಸಂಘದ ವ್ಯಾಪ್ತಿಯಲ್ಲಿ ವ್ಯಾಪಾರ ಸಂಸ್ಥೆಯುಳ್ಳವರಿಗೆ ಸಂಘದಲ್ಲಿ ಸದಸ್ಯರಾಗಬಹುದಾಗಿದೆ. ಆದರೆ ಕುಂಬಳೆ ಮರ್ಚೆಟ್ಸ್ ವೆಲ್ಫೇರ್ ಸಂಘದಲ್ಲಿ ವ್ಯಾಪಾರಿಗಳಲ್ಲದ ಹಲವು ಮಂದಿ ಸದಸ್ಯರಾಗಿದ್ದಾರೆಂಬ ಸೂಚನೆಯಿದೆ. ಸಹಕಾರಿ ಇಲಾಖೆ ಸಂಘದಲ್ಲಿ ನಡೆಸಿದ ತಪಾಸಣೆಯಲ್ಲಿ ಸಾಲದ ಬಡ್ಡಿಯನ್ನು ಸಾಲದ ಮೊತ್ತದೊಂದಿಗೆ ಸೇರಿಸಿ ಹೊಸ ಸಾಲವಾಗಿ ಮಂಜೂರು ಮಾಡಿರುವುದು ಕೂಡಾ ಪತ್ತೆಯಾಗಿದೆ. ಹಲವು ವರ್ಷಗಳಿಂದ ಈ ರೀತಿಯ ಸಾಲಗಳು ಹೆಚ್ಚುತ್ತಿವೆ. ಇಂತಹ ಕ್ರಮಗಳಿಂದ ಸಂಘದ ಭದ್ರತೆಯನ್ನು ಇಲ್ಲವಾಗಿಸಿವೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ರೀತಿ ಸಾಲ ಪಡೆದವರಲ್ಲಿ ವ್ಯಾಪಾರ ಸಂಸ್ಥೆಗಳಿಲ್ಲದವರೂ ಒಳಗೊಂ ಡಿದ್ದಾರೆಂದೂ ಅವರಿಗೆ ನೀಡಿದ ಸಾಲದ ಮೊತ್ತವನ್ನು ಮರಳಿ ಪಡೆಯಲು ಸಂಘಕ್ಕೆ ಸಾಧ್ಯವಿಲ್ಲವೆಂಬ ಸೂಚನೆಯಿದೆ. ಕಳೆದ ಆಗಸ್ಟ್ 30ರಂದು ಸಂಘದಿAದ ನೀಡಿದ ಎಸ್ಟಿಎನ್ಎ ಸಾಲಗಳಲ್ಲಿ 39 ಸಾಲಗಳು ಸಾಲದ ಮಿತಿಯನ್ನು ಮೀರಿ ಸಂಘ ಸಾಲ ನೀಡಿದೆಯೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಾಲಗಳಲ್ಲಿ ಬಾಕಿಯಿರುವ 207ರ ಪೈಕಿ 206 ಕೂಡಾ ಸಾಲದ ಮಿತಿ ಮೀರಿದವುಗಳಾಗಿವೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಯಾವುದೇ ಅಡವಿರಿಸದೆ ನೀಡಿರುವ ಇಂತಹ ಸಾಲಗಳಲ್ಲಿ ಹೆಚ್ಚಿನವುಗಳು ಮರು ಪಾವತಿಸದೆ ಉಳಿದು ಕೊಂಡಿವೆ. ಅದನ್ನು ವಸೂಲು ಮಾಡಲು ಸಾಧ್ಯವಾಗ ದಿದ್ದಲ್ಲಿ ಭವಿಷ್ಯದಲ್ಲಿ ಸಂಘಕ್ಕೆ ಭಾರೀ ನಷ್ಟ ಸಂಭವಿಸಲಿದೆಯೆAದು ಸಹಕಾರಿ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಾಗಾದಲ್ಲಿ ಅದಕ್ಕೆ ಹೊಣೆಗಾರರು ಅಧ್ಯಕ್ಷ, ಆಡಳಿತ ಸಮಿತಿ ಸದಸ್ಯರು, ಕಾರ್ಯದರ್ಶಿ, ಜೋಯಿಂಟ್ ಕಸ್ಟೋಡಿಯನ್ ಎಂಬಿವರಾಗಿರುವ ರೆಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page