ಕುಂಬಳೆ ಶಾಲೆ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ ನಡೆದಿದೆ.

ನಿನ್ನೆ ಸಂಜೆ ಶಾಲೆಬಿಟ್ಟ ಬಳಿಕ ಹತ್ತನೇ ತರಗತಿ ಹಾಗೂ ಪ್ಲಸ್‌ವನ್ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ. ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪರಿಸರ ಹೊಡೆದಾಟ ನಡೆದಿದ್ದು,  ದೀರ್ಘ ಹೊತ್ತಾದರೂ ಶಮನಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಶಾಂತಗೊಳಿಸಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ  ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಪುನರಾವರ್ತಿಸುತ್ತಿರುವುದು ರಕ್ಷಕರು ಹಾಗೂ  ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಕ್ಷುಲ್ಲಕ ವಿಷಯಗಳ ಹೆಸರಲ್ಲೂ ಪರಸ್ಪರ ಹೊಡೆದಾಟ ನಡೆಯುತ್ತಿದೆಯೆನ್ನಲಾಗುತ್ತಿದೆ. ಕಳೆದ ವರ್ಷವೂ ಇದೇ ರೀತಿ ಹೊಡೆದಾಟ ನಡೆದಿದ್ದು, ಇದರಿಂದ ಕೆಲವು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.

RELATED NEWS

You cannot copy contents of this page