ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬಹುಮಹಡಿ ಕಟ್ಟಡ ಉದ್ಘಾಟನೆ ೧೬ರಂದು

ಕುಂಬಳೆ: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿರ್ಮಾಣ ಪೂರ್ತಿಯಾದ ಬಹು ಮಹಡಿ ಕಟ್ಟಡವನ್ನು ಈ ತಿಂಗಳ ೧೬ರಂದು ಅಪರಾಹ್ನ ೨.೩೦ಕ್ಕೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಉದ್ಘಾಟಿಸು ವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪದಾಧಿ ಕಾರಿಗಳು ತಿಳಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿ ತ್ತಾನ್ ಮುಖ್ಯ ಅತಿಥಿಯಾಗಿರುವರು. ೫ ತರಗತಿ ಕೊಠಡಿಗಳಂತೆ ಮೂರು ಮಹಡಿಗಳಲ್ಲಾಗಿ ಕಟ್ಟಡ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ೧೬೭೯ ಮಕ್ಕಳು, ಹೈಯರ್ ಸೆಕೆಂಡರಿಯಲ್ಲಿ ೬೦೫ ಮಕ್ಕಳು ಸೇರಿ ಒಟ್ಟು ೨೨೮೪ ವಿದ್ಯಾರ್ಥಿಳು ವಿದ್ಯಾರ್ಜನೆಗೈಯ್ಯು ತ್ತಿದ್ದಾರೆ. ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕಿಫ್‌ಬಿ ಮೂಲಕ ೩ ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ.೨೦೨೦ ನವೆಂಬರ್ ನಾಲ್ಕರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ ಗೈದಿದ್ದರು. ಉದ್ಘಾಟನೆಯ ಮುಂಚಿತವಾಗಿ ವಿದ್ಯಾರ್ಥಿಗಳಿಂದ ಶೋಭಾಯಾತ್ರೆ ನಡೆಯಲಿದೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಿಟಿಎ ಅಧ್ಯಕ್ಷ ಎ.ಕೆ. ಆರೀಫ್, ಮುಖ್ಯೋ ಪಾಧ್ಯಾಯಿನಿ ಪಿ.ಆರ್. ಶೈಲಜಾ, ಕೆ. ಮುಹಮ್ಮದಲಿ ಮಾವಿನಕಟ್ಟೆ, ಬಿ.ಎ. ರಹ್‌ಮಾನ್ ಆರಿಕ್ಕಾಡಿ, ಕೆ.ಎಂ. ಮೊಯ್ದೀನ್ ಅಸೀಸ್, ಕೆ.ವಿ. ಯೂಸಫ್, ಮುಹಮ್ಮದ್ ಅರಬಿ ಉಳುವಾರ್, ಅನ್ಸಾರ್ ಅಂಗಡಿಮೊಗರು, ಮಧುಸೂದನನ್ ಭಾಗವಹಿಸಿದರು.

You cannot copy contents of this page