ಕುಂಬಳೆ: ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸಹಕಾರಿ ಸಂಘದ ನೇತೃತ್ವದಲ್ಲಿ ಕುಂಬಳೆ ವ್ಯಾಪಾರ ಭವನ ಪರಿಸರದಲ್ಲಿ ಓಣಂ ಸಂತೆ ಆರಂಭಿಸಲಾಯಿತು. ಸಂಘದ ಅಧ್ಯಕ್ಷ ಕೆ. ಶಿವಪ್ಪ ರೈ ಅಸ್ಮ ಕೊಪಾಯಿ ಅವರಿಗೆ ಕಿಟ್ ನೀಡಿ ಉದ್ಘಾಟಿಸಿದರು. ಟಿ. ಶಶಿ ಅಧ್ಯಕ್ಷತೆ ವಹಿಸಿದರು. ನಿರ್ದೇಶಕರಾದ ಸಲೀಂ, ಐತ್ತಪ್ಪ, ಉಮರುಲ್ ಫಾರೂಕ್, ಗೀತಾ, ಪ್ರಮೀಳ, ಶಾರದ ಮಾತನಾಡಿದರು. ಕೆ. ಜಯಕುಮಾರ್ ಸ್ವಾಗತಿಸಿದರು.






