ಕುಂಬಳೆಯಲ್ಲಿ ಮನೆ ಕಳವು: ಬೆರಳಚ್ಚು ಲಭ್ಯ
ಕುಂಬಳೆ: ಆರಿಕ್ಕಾಡಿ ಶ್ರೀ ಹನು ಮಾನ್ ಕ್ಷೇತ್ರ ಬಳಿಯ ನಿವಾಸಿ ನಫೀಸ ಎಂಬವರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ಕೆಲವು ಬೆರಳಚ್ಚುಗಳು ಲಭಿಸಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಲೆಬಾಳುವ ಒಂದು ವಾಚ್ ಹಾಗೂ ಸಿಸಿ ಟಿವಿಯ ಉಪಕರಣಗಳನ್ನು ದೋಚಿದ್ದರು. ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದ ನಫೀಸ ಹಾಗೂ ಕುಟುಂಬ ನಿನ್ನೆ ಮುಂಜಾನೆ ಮರಳಿ ಬಂದಾಗಲೇ ಕಳವು ನಡೆದ ವಿಷಯ ತಿಳಿದುಬಂದಿತ್ತು.