ಕುಂಬಳೆಯಲ್ಲಿ ರೈಲುಗಳಿಗೆ ನಿಲುಗಡೆಗಾಗಿ ಮುಂದುವರಿದ ಬೇಡಿಕೆ
ಕುಂಬಳೆ: ಕಾಸರಗೋಡು-ತಲ ಪಾಡಿ ಮಧ್ಯೆ ಅಭಿವೃದ್ಧಿ ಹೊಂದುತ್ತಿರುವ ಪೇಟೆಗಳ ಪೈಕಿ ಕುಂಬಳೆಯೂ ಒಂದು. ಪೆರ್ಲ, ಬದಿಯಡ್ಕ ಸಹಿತ ವಿವಿಧ ಭಾಗಗಳ ಜನರು ಪ್ರತೀ ದಿನ ವಿವಿಧ ಅಗತ್ಯಗಳಿಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ದೂರದ ಊರುಗಳಿಗೆ ಸಂಚರಿಸಲು ರೈಲುಗಳನ್ನೇ ಆಶ್ರಯಿಸುವವರು ಇದ್ದಾರೆ. ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಪೇಟೆಗೆ ಸಮೀಪದಲ್ಲೇ ರೈಲು ನಿಲ್ದಾಣವೂ ಇದೆ. ಆದರೆ ಇಲ್ಲಿ ಕೆಲವೇ ರೈಲುಗಳಿಗೆ ಮಾತ್ರ ನಿಲುಗಡೆ ಇದೆ. ಆದ್ದರಿಂದ ಈ ಭಾಗದ ಜನರಿಗೆ ಇಲ್ಲಿಂದ ರೈಲಿನಲ್ಲಿ ಪ್ರಯಾಣಿಸಲು ಸೌಕರ್ಯ ಇಲ್ಲದಂತಾಗಿದೆ. ಬೆಳಿಗ್ಗೆ ೯ ಗಂಟೆ ಬಳಿಕ ಸಂಜೆವರೆಗೆ ಕುಂಬಳೆ ರೈಲು ನಿಲ್ದಾಣದಲ್ಲಿ ಯಾವುದೇ ರೈಲುಗಳಿಗೆ ನಿಲುಗಡೆಯಿಲ್ಲ. ಇದರಿಂದ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿ ಕರು ಕಾಸರಗೋಡು ಅಥವಾ ಮಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ದೀರ್ಘದೂರ ರೈಲುಗ ಳಿಗೆ ನಿಲುಗಡೆ ಮಂಜೂರು ಮಾಡ ಬೇಕೆಂಬ ಬೇಡಿಕೆಯೂ ಈ ಹಿಂದಿನಿಂ ದಲೇ ಕೇಳಿ ಬಂದಿದೆ. ರೈಲುಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕುಂಬಳೆಯಲ್ಲಿ ಅವುಗಳಿಗೆ ನಿಲುಗಡೆ ಇಲ್ಲದಿರುವುದು ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.
ಇನ್ನಷ್ಟು ರೈಲುಗಳು ಮಂಗಳೂರು -ಕಲ್ಲಿಕೋಟೆ ಭಾಗಗಳಿಗೆ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಯಲ್ಲಿ ಒಂದು ರೈಲಿಗಾದರೂ ನಿಲುಗಡೆ ಮಂಜೂರು ಮಾಡಬೇಕೆಂದು ಒತ್ತಾ ಯಿಸಿ ಪ್ರಯಾಣಿಕರು, ಪ್ಯಾಸೆಂಜರ್ಸ್ ಅಸೋಸಿಯೇಶನ್, ವ್ಯಾಪಾರಿಗಳು ಹಾಗೂ ಸ್ವಯಂ ಸೇವಾ ಸಂಘಗಳು ರಂಗಕ್ಕಿಳಿದಿವೆ. ಈ ತಿಂಗಳಲ್ಲೇ ವಂದೇ ಭಾರತ್ ಸಹಿತ ಎರಡು ರೈಲುಗಳು ಮಂಗಳೂರು- ಕಲ್ಲಿಕೋಟೆ ಭಾಗಗಳಿಗೆ ಸಂಚಾರ ಆರಂಭಿಸಿವೆ. ಮಂಗಳೂರು- ರಾಮೇಶ್ವರ ರೈಲು ಶೀಘ್ರ ಸಂಚಾರ ಆರಂಭಿಸಲಿದೆ. ಹಾಗಿರುವಾಗ ಪ್ರಸ್ತುತ ರೈಲುಗಾಡಿಗೆ ಅಥವಾ ಕಾಚೇಗುಡೆ ಎಕ್ಸ್ಪ್ರೆಸ್ಗೆ ಕುಂಬಳೆಯಲ್ಲಿ ನಿಲುಗಡೆ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದೆ.
ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಈಗ ಕಲ್ಲಿಕೋಟೆ ವರೆಗೆ ವಿಸ್ತರಿಸಲಾಗಿದೆ. ಈ ರೈಲಿಗೆ ಕುಂಬಳೆಯಲ್ಲಿ ನಿಲುಗಡೆ ಮಂಜೂರು ಮಾಡಬೇಕೆಂದು ಈ ಹಿಂದೆಯೇ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಅದೇ ರೀತಿ ಪರಶುರಾಂ, ಮಾವೇಲಿ ಎಕ್ಸ್ಪ್ರೆಸ್ ರೈಲುಗಾಡಿಗಳಿಗೆ ನಿಲುಗಡೆ ಮಂಜೂರು ಮಾಡಬೇಕೆಂದು ಒತ್ತಾ ಯಿಸಿ ಪ್ಯಾಸೆಂಜರ್ಸ್ ಅಸೋಸಿ ಯೇಶನ್, ವ್ಯಾಪಾರಿಗಳು, ನಾಗರಿಕರು ಸಹಿತ ವಿವಿಧ ಸಂಘಟನೆಗಳು ಸಚಿವರಿಗೆ, ಜನಪ್ರತಿನಿಧಿಗಳಿಗೆ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸಿದ್ದಾರೆ. ಒಂದು ದಶಕ ಕಾಲದಿಂದ ಈ ಬೇಡಿಕೆಯನ್ನು ಮುಂದಿ ರಿಸಲಾಗುತ್ತಿದ್ದರೂ ರೈಲ್ವೇಯ ಭಾಗದಿಂದ ಅನುಕೂಲ ಕ್ರಮವುಂಟಾಗಿಲ್ಲ.
ಸುಮಾರು ೩೭ ಎಕ್ರೆ ಸ್ಥಳದಲ್ಲಿ ಕುಂಬಳೆ ರೈಲ್ವೇ ನಿಲ್ದಾಣ ನೆಲೆಗೊಂಡಿದೆ. ಪ್ರತಿ ದಿನ ಹಲವಾರು ಮಂದಿ ಪ್ರಯಾ ಣಿಕರು ಇಲ್ಲಿಂದ ರೈಲುಗಾಡಿಗಳಲ್ಲಿ ಪ್ರಯಾಣಿಸುತ್ತಿದ್ದು, ಹೆಚ್ಚಿನ ಆದಾಯ ಲಭಿಸುವ ನಿಲ್ದಾಣ ಇದಾಗಿದೆ. ಆದರೆ ಮೂಲಭೂತ ಸೌಕರ್ಯ ಅಭಿವೃ ದ್ಧಿಯಲ್ಲಿ ಕುಂಬಳೆಯನ್ನು ಅವಗಣಿಸ ಲಾಗಿದೆ. ಈ ನಿಲ್ದಾಣವನ್ನು ಅಭಿವೃದ್ಧಿ ಪಡಿಸಬೇಕೆಂದು ಹಲವು ವರ್ಷಗಳಿಂದ ಪ್ರಯಾಣಿಕರು ಸಹಿತ ವಿವಿಧ ಸಂಘಟನೆಗಳು ರೈಲ್ವೇ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ನಿಲ್ದಾಣದಲ್ಲಿ ರಿಸರ್ವೇಶನ್ ಸೌಕರ್ಯ ಏರ್ಪಡಿಸ ಬೇಕು, ಧಾರಾಳ ಸ್ಥಳ ಸೌಕರ್ಯವುಳ್ಳ ಈ ನಿಲ್ದಾಣವನ್ನು ಸ್ಯಾಟಲೈಟ್ ನಿಲ್ದಾಣ ವಾಗಿ ಭಡ್ತಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಲಾಗಿದೆ.