ಕುಂಬಳೆಯಲ್ಲಿ ಸ್ಥಾಪಿಸಿದ ಬೀದಿ ದೀಪಗಳ ಆಯುಷ್ಯ ಒಂದು ತಿಂಗಳು ಮಾತ್ರ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಕೆಎಸ್‌ಟಿಪಿ ರಸ್ತೆ ನಿರ್ಮಾಣವಾದ ಬಳಿಕ ಎರಡು ತಿಂಗಳ ಹಿಂದೆಯಷ್ಟೇ ಸ್ಥಾಪಿಸಿದ ಬೀದಿ ದೀಪಗಳು  ಕೆಟ್ಟು ಹೋಗಿದ್ದು, ಇದರಿಂದ ರಾತ್ರಿ ಹೊತ್ತಿನಲ್ಲಿ ಪೇಟೆ ಅಂಧಕಾರದಲ್ಲಿ ಮುಳುಗುತ್ತಿದೆ.  ಕುಂಬಳೆ ಪೇಟೆಯಲ್ಲಿ  ವಿವೇಕಾನಂದ ಸರ್ಕಲ್‌ನಿಂದ ಬದಿಯಡ್ಕ ರಸ್ತೆಯಲ್ಲಿ ಅನಿಲ್ ಕುಂಬಳೆ ರಸ್ತೆ ವರೆಗೆಗಿನ ಡಿವೈಡರ್‌ನಲ್ಲಿ ಸ್ಥಾಪಿಸಿದ  ಬೀದಿ ದೀಪಗಳ ಸ್ಥಿತಿ ಇದಾಗಿದೆ. ಎರಡು ತಿಂಗಳ ಹಿಂದೆ ಸ್ಥಾಪಿಸಿದ ಬೀದಿ ದೀಪಗಳು ಕೇವಲ ಒಂದು ತಿಂಗಳು ಮಾತ್ರ ಉರಿದಿದೆ.   ಆದರೆ ಅದರ ದುರಸ್ತಿಗೆ ಯಾರೂ ಕ್ರಮ ಕೈಗೊಂಡಿಲ್ಲ. ಬೀದಿ ದೀಪಗಳು ಉರಿಯದ ಬಗ್ಗೆ  ನಾಗರಿಕರು ಪಂಚಾಯತ್, ಕೆಎಸ್‌ಟಿಪಿ ಅಧಿಕಾರಿ ಗಳಿಗೆ ದೂರು ನೀಡಿದರೂ ಕ್ರಮ ಉಂಟಾಗಲಿಲ್ಲ. ಇನ್ನು ಮಳೆಗಾಲದಲ್ಲಿ ಇದೇ ಸ್ಥಿತಿಯಾದರೆ  ಕತ್ತಲು ಆವರಿ ಸಿಕೊಂಡ ಪ್ರದೇಶದಲ್ಲಿ ಅಪಘಾತಕ್ಕೆ ಸಾಧ್ಯತೆಯಿದೆಯೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

RELATED NEWS

You cannot copy contents of this page