ಕುಕ್ಕೆಯಲ್ಲಿ ಏರಿದ ಕೊಪ್ಪರಿಗೆ: ಉತ್ಸವಕ್ಕೆ ಚಾಲನೆ
ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಕೊಪ್ಪರಿಗೆ ಏರುವುದರೊಂದಿಗೆ ಚಂಪಾ ಷಷ್ಠಿ ಮಹೋತ್ಸವ ಆರಂಭಗೊಂಡಿತು. ಇತರ ದೇವಸ್ಥಾನಗಳಲ್ಲಿ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ದೊರೆಯುವುದಾದರೆ ಕುಕ್ಕೆಯಲ್ಲಿ ಕೊಪ್ಪರಿಗೆ ಏರಿಸಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಇಂದು ಬೆಳಿಗ್ಗೆ ರಾಮ ಲಕ್ಷ್ಮಣ ಎಂಬ ಜೋಡಿ ಕೊಪ್ಪರಿಗೆ ಏರಿಸಿ ಷಷ್ಠಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಅಕ್ಷಯ ಪಾತ್ರೆ ಎಂದು ಈ ಕೊಪ್ಪರಿಗೆಗಳನ್ನು ಕರೆಯಲಾಗುತ್ತದೆ. ಕ್ಷೇತ್ರದಲ್ಲಿ ಇಂದು ಅಖಂಡ ಭಜನೋತ್ಸವ ನಡೆಯಲಿದೆ.