ಕುಟುಂಬಶ್ರೀ ಕಲೋತ್ಸವ: ಸ್ವಾಗತಸಮಿತಿ ರೂಪೀಕರಣ

ಕಾಸರಗೋಡು: ಕುಟುಂಬಶ್ರೀ ನೆರೆಕರೆ ಕೂಟ, ಆಕ್ಸಿಲರಿ ಸದಸ್ಯರ ಕಲೋತ್ಸವದ ಯಶಸ್ವಿಗಾಗಿ ಕಾಸರಗೋಡು ಜಿಲ್ಲಾ ಸ್ವಾಗತ ಸಮಿತಿ ರೂಪೀಕರಣ ಸಭೆ ಉದುಮ ಅಂಬಿಕಾ ಸಭಾಂಗಣದಲ್ಲಿ ಜರಗಿತು. ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸಿದರು.

ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎಂ. ಮಣಿಕಂಠನ್, ಉದುಮ ಪಂಚಾಯತ್ ಅಧ್ಯಕ್ಷೆ ಪಿ. ಲಕ್ಷ್ಮಿ, ಕುಟುಂಬಶ್ರೀ ಜಿಲ್ಲಾ ಮಿಶನ್ ಕೋಆರ್ಡಿನೇಟರ್ ಟಿ.ಟಿ. ಸುರೇಂ ದ್ರನ್ ಸಹಿತ ಹಲವರು ಭಾಗವಹಿಸಿ ದರು. ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಶಾಸಕ ಸಿ.ಎಚ್. ಕುಂಞಂಬು, ಸಂಚಾಲಕರಾಗಿ ಟಿ.ಟಿ. ಸುರೇಂದ್ರನ್ ಆಯ್ಕೆಯಾದರು. ಈ ತಿಂಗಳ 26ರಿಂದ 28ರ ತನಕ ಪಾಲಕುನ್ನ್ ನಲ್ಲಿ ಜಿಲ್ಲಾ ಕಲೋತ್ಸವ ನಡೆಯಲಿದೆ.

You cannot copy contents of this page