ಕುಟುಂಬಶ್ರೀ ರಾಜ್ಯ ಮಟ್ಟದ ಕಲೋತ್ಸವ: ನಿರಂತರವಾಗಿ ಐದನೇ ಬಾರಿ ಗೆದ್ದ ಕಾಸಗೋಡು ಜಿಲ್ಲೆ
ಕಾಸರಗೋಡು: ಕಾಲಿಕಡವಿನಲ್ಲಿ ನಡೆದ ಕುಟುಂಬಶ್ರೀ ರಾಜ್ಯಮಟ್ಟದ ಕಲೋತ್ಸವ (ಕುಟುಂಬಶ್ರೀ ಆರಂಙ ಸರ್ಗೋತ್ಸವ)ದಲ್ಲಿ ಕಾಸರಗೋಡು ಜಿಲ್ಲಾ ತಂಡ ಸರ್ವಾಂಗಿಕ ಪ್ರಶಸ್ತಿ ಗೆದ್ದು ತನ್ನ ಮುಡಿಗೇರಿಸಿಕೊಂಡಿದೆ. ಇದು ಕುಟುಂಬಶ್ರೀ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆ ನಿರಂತರವಾಗಿ ಗೆದ್ದ ನಾಲ್ಕನೇ ಚಾಂಪಿಯನ್‌ಶಿಪ್ ಆಗಿದೆ.
ನಿನ್ನೆ ಸಂಜೆ ಸಮಾಪ್ತಿಗೊಂಡ ಈ ಮೂರು ದಿನಗಳ ಕಲೋತ್ಸವದ ಸಮಾರೋಪ ಸಮಾರಂಭವನ್ನು ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಂ.ಬಿ.ರಾಜೇಶ್ ಉದ್ಘಾಟಿಸಿದರು. ಶಾಸಕ ಎಂ. ಗೋಪಾಲನ್ ಅಧ್ಯಕ್ಷತೆ ವಹಿಸಿ ಬಹುಮಾನಗಳನ್ನು ವಿತರಿಸಿದರು. ಕುಟುಂಬಶ್ರೀ ಕಾರ್ಯನಿರ್ವಹಣಾ ಅಧ್ಯಕ್ಷ ಜಾಫರ್ ಮಾಲೀಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಸೇರಿದಂತೆ ಹಲವರು ಭಾಗವಹಿಸಿ ಮಾತನಾಡಿದರು.