ಕುದ್ರೆಕೂಡ್ಲುನಲ್ಲಿ ತೆಂಗಿನ ಮರ ಬಿದ್ದು ಮನೆ, ಆಟೋರಿಕ್ಷಾ ಹಾನಿ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುದ್ರೆಕೂಡ್ಲು ಎಂಬಲ್ಲಿ ವಾಸಿಸುವ ಕೃಷ್ಣ ಹೊಳ್ಳರ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಮೊನ್ನೆ ರಾತ್ರಿ 8 ಗಂಟೆ ವೇಳೆ ಬೀಸಿದ ಭಾರೀ ಗಾಳಿಗೆ ಮರ ಬಿದ್ದಿದ್ದು ಈ ವೇಳೆ ಕೃಷ್ಣ ಹೊಳ್ಳರ ಪುತ್ರ ರವಿಶಂಕರ ಹೊಳ್ಳ ಗಾಯಗೊಂಡಿದ್ದಾರೆ. ಇವರು ವಿದ್ಯುತ್ ಚಾಲಿತ ಆಟೋರಿಕ್ಷಾವನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಆಟೋರಿಕ್ಷಾ ಸಹಿತ ಮನೆಗೆ ಮರ ಬಿದ್ದಿದೆ. ಇದರಿಂದ ರಿಕ್ಷಾವು ಹಾನಿಯಾಗಿದೆ. ಘಟನೆ ಸ್ಥಳಕ್ಕೆ ಪೈವಳಿಕೆ ಗ್ರೂಪ್ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ಸ್ಪೆಷಲ್ ವಿಲ್ಲೇಜ್ ಆಫೀಸರ್ ಸುರೇಶ್ ಪಿ., ಸ್ಟಾಫ್ ಅಶ್ವಿತ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.