ಕುಬಣೂರು ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಮತ್ತೆ  ಬೆಂಕಿ ಅನಾಹುತ: ಸ್ಥಳೀಯರಲ್ಲಿ ಹೆಚ್ಚಿದ ಭೀತಿ

ಉಪ್ಪಳ: ಕುಬಣೂರು ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ತ್ಯಾಜ್ಯಕ್ಕೆ ಮತ್ತೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ನಿನ್ನೆ ಮಧ್ಯಾಹ್ನ ವೇಳೆ ತ್ಯಾಜ್ಯ ರಾಶಿಯಿಂದ ಬೆಂಕಿ ಕಾಣಿಸಿಕೊಂ ಡಿದೆ. ಇದರಿಂದ ಪರಿಸರದಲ್ಲಿ  ಭಾರೀ ಹೊಗೆ, ದುರ್ವಾಸನೆ ಹರಡಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತು.  ಕೂಡಲೇ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ತ್ಯಾಜ್ಯ ರಾಶಿಗೆ ಬೆಂಕಿ ಹೇಗೆ ತಗಲಿದೆ ಎಂದು ತಿಳಿದುಬಂದಿಲ್ಲ.

ಒಂದು ವಾರ ಹಿಂದೆ ಇದೇ ತ್ಯಾಜ್ಯ ಸಂಸ್ಕರಣೆ ಕೇಂದ್ರದಲ್ಲಿ ಭಾರೀ ಬೆಂಕಿ ಅನಾಹುತ ಉಂಟಾಗಿತ್ತು. ಅಂದು ಕಟ್ಟಡ, ಯಂತ್ರಗಳು ಉರಿದು ನಾಶಗೊಂಡು ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗಿತ್ತು.  ಉಪ್ಪಳ, ಕಾಸರಗೋಡು, ಕಾಞಂಗಾಡ್‌ನಿಂದ ತಲುಪಿದ ಅಗ್ನಿಶಾಮಕದಳಗಳು  ಭಾರೀ ಪ್ರಯತ್ನದಿಂದ ಬೆಂಕಿ ನಂದಿಸಿದ್ದವು. ಆದರೆ ಅಂದು ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ. ಆ ಬೆಂಕಿ ಅನಾಹುತದಲ್ಲಿ ನಿಗೂಢತೆಗಳಿ ವೆಯೆಂಬ ಆರೋಪ ಕೇಳಿಬರುತ್ತಿರುವಾಗಲೇ ನಿನ್ನೆ ಮತ್ತೆ ಬೆಂಕಿ  ಕಾಣಿಸಿದೆ.

ನಿನ್ನೆ ಘಟನೆ ಸ್ಥಳಕ್ಕೆ ಮಂಗಲ್ಪಾಡಿ ಪಂಚಾಯತ್ ಅಧಿಕಾರಿಗಳು, ವಿವಿಧ ವಾರ್ಡ್‌ಗಳ ಜನಪ್ರತಿನಿಧಿಗಳು, ತಹಶೀಲ್ದಾರ್, ಕಾಸರಗೋಡು ಜೋಯಿಂಟ್ ಡೈರೆಕ್ಟರ್, ಕುಬಣೂರು ಗ್ರಾಮಾಧಿಕಾರಿ, ಕುಂಬಳೆ ಪೊಲೀಸರು ಮೊದಲಾದವರು ಭೇಟಿ ನೀಡಿದ್ದಾರೆ.

RELATED NEWS

You cannot copy contents of this page