ಕುಬಣೂರು ಸುವರ್ಣಗಿರಿ ಸೇತುವೆ ಬಳಿ ಕಾಂಕ್ರೀಟ್ ರಸ್ತೆ ಶೋಚನೀಯ: ಸಂಚಾರ ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ನೂತನ ಸೇತುವೆ ಬಳಿ ಕಾಂಕ್ರೀಟ್ ರಸ್ತೆ ಹದಗೆಟ್ಟು ಶೋಚನೀಯÁವಸ್ಥೆಗೆ ತಲುಪಿ ಸಂಚಾರಕ್ಕೆ ಭೀತಿ ಉಂಟಾಗಿದೆ. ಸುಮಾರು ಒಂ zದೂವರೆ ವರ್ಷಗಳ ಹಿಂದೆ ಕಾಸರಗೋಡು ಅಭಿವೃದ್ದಿ ಪ್ಯಾಕೇಜ್‌ನಿಂದ ಈ ಸೇತುವೆಯನ್ನು ನಿರ್ಮಿ ಸಲಾಗಿದೆ. ಇದೇ ವೇಳೆ ಸೇತುವೆಗೆ ಪ್ರವೇಶಿಸುವಲ್ಲಿ ಮಾತ್ರ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ಆದರೆ ಇದೀಗ ಕಳೆದ ಹಲವು ತಿಂಗಳ ಹಿಂದೆ ಕಾಂಕ್ರೀಟ್ ಎದ್ದು ಕಬ್ಬಿಣದ ಸಲಾಕೆ ಕಾಣುತ್ತಿರುವುದು ಸಂಚಾರಕ್ಕೆ ಅಪಾಯಕಾರಿಯಾಗಿದೆ. ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿರುವುದಾಗಿ ಈ ಹಿಂದೆಯೇ ಊರವರು ಆರೋಪಿಸಿದ್ದರು.
ಶಾಲೆ, ಕ್ಷೇತ್ರ, ಮಸೀದಿಗಳಿಗೆ ತೆರಳುವ ರಸ್ತೆ ಇದಾಗಿದೆ. ಅಲ್ಲದೆ ಕುಬಣೂರು ಶಾಂತಿಗುರಿ ಸಹಿತ ಹಲವಾರು ಕಡೆಗಳಿಗೆ ದಿನಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಹದಗೆಟ್ಟರಸ್ತೆ ಜನರಲ್ಲಿ ಆತಂಕವನ್ನುAಟುಮಾಡಿದೆ. ಕಾಂಕ್ರೀಟ್ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದಲ್ಲಿ ಇನ್ನಷ್ಟು ಶೋಚನೀಯÁವಸ್ಥೆ ತಲುಪಿ ಸಂಚಾರಮೊಟಕು ಗೊಳ್ಳ ಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿದ್ದಾರÉ.

RELATED NEWS

You cannot copy contents of this page