ಕುವೈಟ್ ಬ್ಯಾಂಕ್ ನಿಂದ 700 ಕೋಟಿ ರೂ. ಲಪಟಾವಣೆ: 1425 ಕೇರಳೀಯರಿಗಾಗಿ ಶೋಧ


ಕಾಸರಗೋಡು: ಕುವೈಟ್ ಬ್ಯಾಂಕ್ನಿAದ ಸಾಲ ರೂಪದಲ್ಲಿ ಕೇರಳೀಯರಾದ 1425 ಮಂದಿ 700 ಕೋಟಿ ರೂ. ಪಡೆದು ಅದನ್ನು ಮರು ಪಾವತಿಸದೆ ವಂಚನೆ ನಡೆಸಿ ಆ ದೇಶವನ್ನು ತೊರೆದ ಬಗ್ಗೆ ವರದಿಯಾಗಿದೆ. ಹೀಗೆ ವಂಚನೆ ನಡೆಸಿದವರ ಪತ್ತೆಗಾಗಿ ಕೇರಳದಲ್ಲಿ ಶೋಧ ಆರಂಭಿಸಲಾಗಿದೆ. ಗಲ್ಫ್ ಬ್ಯಾಂಕ್ ಕುವೈಟ್ ಶೇರ್ ಹೋಲ್ಡಿಂಗ್ ಕಂಪೆನಿ ಪಬ್ಲಿಕ್ ಎಂಬ ಬ್ಯಾಂಕ್ನಿAದ ಸಾಲ ಈ ರೀತಿ ಪಡೆದು ವಂಚನೆ ನಡೆಸಲಾಗಿದೆ. ಆ ಬಗ್ಗೆ ಪ್ರಸ್ತುತ ಬ್ಯಾಂಕ್ನ ಅಧಿಕಾರಿಗಳು ಕೇರಳಕ್ಕೆ ಆಗಮಿಸಿ ವಂಚನೆ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಮಾತ್ರವಲ್ಲ ಈ ದೂರಿನ ಕುರಿತಾದ ತನಿಖೆಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಸ್ತಾಂತರಿಸಿದ್ದಾರೆ. ಇದರಂತೆ ರಾಜ್ಯ ಕ್ರೈಮ್ ಬ್ರಾಂಚ್ನ ದಕ್ಷಿಣ ವಲಯ ರೇಂಜ್ ಐಜಿಗೆ ಈ ತನಿಖೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ.
2019ರಿಂದ 2022ರ ಅವಧಿಯಲ್ಲಿ ಕುವೈಟ್ ಬ್ಯಾಂಕ್ನಿAದ 50 ಲಕ್ಷ ರೂ.ನಿಂದ ಮೂರು ಕೋಟಿ ರೂ.ಗಳ ತನಕ ಸಾಲ ರೂಪದಲ್ಲಿ ಪಡೆದು ಅದನ್ನು ಸಕಾಲದಲ್ಲಿ ಮರು ಪಾವತಿಸದೆ ವಂಚಿಸಿರುವುದಾಗಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಹೀಗೆ ಸಾಲ ಪಡೆದು ವಂಚಿಸಿದವರು ನಂತರ ಕುವೈಟ್ನ್ನೇ ಬಿಟ್ಟಿದ್ದಾರೆ. ವಂಚನೆ ನಡೆಸಿದವರಲ್ಲಿ 1,425 ಮಂದಿ ಕೇರಳೀಯರಾಗಿದ್ದಾರೆ. ಇದರಲ್ಲಿ ಹಲವರು ಕೇರಳಕ್ಕೆ ಹಿಂತಿರುಗಿದ್ದು, ಇನ್ನೂ ಹಲವರು ಯುರೋಪ್, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ನಲ್ಲಿ ಜೀವಿಸುತ್ತಿರುವುದಾಗಿ ಯೂ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ವಂಚನೆ ನಡೆಸಿದ ಬಗ್ಗೆ ಎರ್ನಾಕುಳಂ ಜಿಲ್ಲೆಯಲ್ಲಿ 9 ಕೇಸುಗಳು ದಾಖಲಾಗಿವೆ. ಇತರ ಜಿಲ್ಲೆಗಳಲ್ಲಿ ಇಂತಹ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ.
ಕುವೈಟ್ನಲ್ಲಿ ಆರೋಗ್ಯ ವಲಯದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಅಲ್ಲಿನ ಬ್ಯಾಂಕ್ಗಳಿAದ ಸುಲಭವಾಗಿ ಸಾಲ ಲಭಿಸುತ್ತಿದೆ. ಮೊದಲು ಸಣ್ಣ ಮಟ್ಟಿನ ಸಾಲ ನೀಡಲಾಗುತ್ತದೆ. ಹೀಗೆ ಸಾಲ ಪಡೆದವರು ಅದನ್ನು ಮೊದಲು ಆದಷ್ಟು ಬೇಗ ಮರು ಪಾವತಿಸುವ ಮೂಲಕ ಬ್ಯಾಂಕ್ನ ನಂಬುಗೆ ಪಡೆಯುತ್ತಾರೆ. ಅನಂತರ ಕೋಟಿ ಗಟ್ಟಲೆ ರೂ. ಸಾಲ ಪಡೆದು ಬಳಿಕ ಅದನ್ನು ಮರು ಪಾವತಿಸದೆ, ದಿಢೀರ್ ಆಗಿ ಆ ದೇಶವನ್ನು ತೊರೆಯುತ್ತಿರುವುದು ಇಂತಹ ವಂಚಕರ ರೀತಿಯಾಗಿದೆ ಎಂದು ತನಿಖಾ ತಂಡ ತಿಳಿಸಿದೆ. ಇದೇ ರೀತಿಯ ವಂಚನೆ ಇತರ ಗಲ್ಫ್ ರಾಷ್ಟ್ರಗಳಲ್ಲೂ ನಡೆಸಲಾಗುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

You cannot copy content of this page