ಕುವೈತ್ ಅಗ್ನಿದುರಂತ ಬಲಿತೆಗೆದ ಕಾಸರಗೋಡಿನ ಇಬ್ಬರಿಗೆ ಕಣ್ಣೀರ ಕೋಡಿಯೊಂದಿಗೆ ವಿದಾಯ
ಕಾಸರಗೋಡು: ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂ ಡ ಕಾಸರಗೋಡಿನ ಚೆರ್ಕಳ ಕುಂಡಡ್ಕದ ಕೆ. ರಂಜಿತ್ (34) ಮತ್ತು ಮೂಲತಃ ಚೆರ್ವತ್ತೂರು ಪಿಲಿಕೋಡು ಎರವಿಲ್ ನಿವಾಸಿ ಪ್ರಸ್ತುತ ತೃಕರಿಪುರ ಇಳಂಬಚ್ಚಿ ನಿವಾಸಿಯಾಗಿರುವ ಕೆ. ಕುಂಞಿಕೇಳು (48)ರಿಗೆ ನಿನ್ನೆ ಅವರ ಮನೆಗಳಲ್ಲಿ ನೆರೆದ ಭಾರೀ ಜನಸ್ತೋಮ ಮಧ್ಯೆ ಕಣ್ಣೀರ ಕೋಡಿಯೊಂದಿಗೆ ಅಂತಿಮ ವಿದಾಯ ಹೇಳಲಾಯಿತು.
ಸರಕಾರದ ಪರವಾಗಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ರಂಜಿತ್‌ರ ಮೃತ ದೇಹಕ್ಕೆ ಪುಷ್ಪಚಕ್ರ ಸಮರ್ಪಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಬಿಜೆಪಿ ನೇತಾರ ಎ.ಪಿ. ಅಬ್ದುಲ್ಲ ಕುಟ್ಟಿ, ಮಾಜಿ ಸಂಸದ ಪಿ. ಕರುಣಾಕರನ್, ವಿವಿಧ ರಾಜ ಕೀಯ ಪಕ್ಷಗಳ ನೇತಾರರಾದ ನ್ಯಾಯ ವಾದಿ ಕೆ. ಶ್ರೀಕಾಂತ್, ಎಂ.ವಿ. ಬಾಲಕೃಷ್ಣನ್ ಮಾಸ್ತರ್, ಪಿ.ಕೆ. ಫೈಸಲ್, ಕಲ್ಲಟ್ರ ಮಾಹಿನ್ ಹಾಜಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕೆ.ಪಿ. ಸತೀಶ್ಚಂದ್ರನ್, ಶಾನವಾಸ್ ಪಾದೂರು, ಫಾದರ್ ಮ್ಯಾಥ್ಯೂ ಬೇಬಿ, ಎಂ.ಎಲ್. ಅಶ್ವಿನಿ, ಖಾದರ್ ಬದ್ರಿಯಾ ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಸ್ತರಗಳ ಅಪಾರ ಜನಸ್ತೋಮವೇ ಅಲ್ಲಿ ನೆರೆದಿತ್ತು.
ಅಗಲಿದ ರಂಜಿತ್‌ರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಂಜಿತ್ ಸೇರಿದಂತೆ ಕುವೈತ್ ಅಗ್ನಿದುರಂತದಲ್ಲಿ ಪ್ರಾಣ ಕಳೆದುಕೊಂಡ ೨೪ ಕೇರಳೀಯರೂ ಸೇರಿದಂತೆ ೪೬ ಮಂದಿಯ ಮೃತದೇಹಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ನಿನ್ನೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಂದಿಳಿಸಲಾಯಿತು. ಅಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್‌ಗೋಪಿ ಸೇರಿದಂತೆ ಹಲವು ಸಚಿವರು ಮತ್ತು ವಿವಿಧ ರಾಜಕೀಯ ಹಾಗೂ ಇತರ ಸಂಘಟನೆಗಳ ಗಣ್ಯರು ಸೇರಿದಂತೆ ಸಹಸ್ರಾರು ಮಂದಿ ಮೃತದೇಹಗಳ ಅಂತಿಮ ದರ್ಶನ ನಡೆಸಿದರು. ಆ ಬಳಿಕ ರಂಜಿತ್ ಮತ್ತು ಪಿ. ಕುಂಞಿಕೇಳುರ ಮೃತದೇಹಗಳನ್ನು ವಿಶೇಷ ಆಂಬುಲೆನ್ಸ್‌ಗಳಲ್ಲಿ ಅವರವರ ಮನೆಗಳಿಗೆ ತಲುಪಿಸಲಾಯಿತು. ನಂತರ ಅಂತಿಮ ದರ್ಶನಕ್ಕಿರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕುಂಞಿಕೇಳು ಅವರ ಮೃತದೇಹಕ್ಕೆ ಅವರ ನಿವಾಸದಲ್ಲಿ ಸರಕಾರದ ವತಿ ಯಿಂದ ಸಬ್ ಕಲೆಕ್ಟರ್ ಸೂಫಿಯಾನ್ ಅಹಮ್ಮದ್ ಪುಷ್ಪಗುಚ್ಛ ಸಮರ್ಪಿಸಿದರು. ಸಂಸದ ಉಣ್ಣಿತ್ತಾನ್, ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ಅಲ್ಲಿಗೆ ಪ್ರವಹಿಸಿ ಮೃತದೇಹದ ಅಂತಿಮ ದರ್ಶನ ಪಡೆದರು.
ಬಳಿಕ ರಂಜಿತ್ ಮತ್ತು ಕುಂಞಿ ಕೇಳು ಅವರ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆ ವೇಳೆ ಸಹಸ್ರಾರು ಮಂದಿ ನೆರೆದಿದ್ದರು. ಅಗಲಿದ ರಂಜಿತ್ ಮತ್ತು ಕುಂಞಿಕೇಳುರ ಮೃತದೇಹಗಳನ್ನು ಮನೆಗೆ ತರುವ ವೇಳೆ ಮನೆಯವರ ರೋ ಧನ ಮುಗಿಲುಮುಟ್ಟಿತ್ತು. ಎಲ್ಲರೂ ಸೇರಿ ಅವರನ್ನು ಸಂತೈಸಿದರೂ ಅವರ ಮನದಾ ಳದ ದುಃಖವನ್ನು ತಣಿಸಲು ಸಾಧ್ಯವಾಗಲಿಲ್ಲ.