ಕೃಪೇಶ್, ಶರತ್‌ಲಾಲ್ ಸಂಸ್ಮರಣೆ : ಇಂದು ಅಪರಾಹ್ನ ಡಿ.ಕೆ. ಶಿವಕುಮಾರ್ ಕಲ್ಯೋಟ್‌ಗೆ

ಕಾಸರಗೋಡು: ಪೆರಿಯ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‌ಲಾಲ್‌ರ ಆರನೇ ಸಂಸ್ಮರಣಾ ಕಾರ್ಯಕ್ರಮ ಇಂದು ಬೆಳಿಗ್ಗೆ ಆರಂಭಗೊಂಡಿತು. ಮೃತರ ಸ್ಮೃತಿ ಮಂಟಪ ದಲ್ಲಿ ಕಾಂಗ್ರೆಸ್, ಯೂತ್ ಕಾಂಗ್ರೆಸ್ ನೇತಾರರು, ಕಾರ್ಯಕರ್ತರು, ಕೃಪೇಶ್ ಮತ್ತು ಶರತ್‌ಲಾಲ್‌ರ ಕುಟುಂಬದವರು, ಸ್ನೇಹಿತರು ಸೇರಿದಂತೆ ಪುಷ್ಪಾರ್ಚನೆ ನಡೆಸಿದರು.

ಸಂಜೆ 3 ಗಂಟೆಗೆ ಕಲ್ಯೋಟ್‌ನಲ್ಲಿ ನಡೆಯುವ ಸಂಸ್ಮರಣಾ ಸಭೆಯನ್ನು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸು ವರು. ಕಾಂಗ್ರೆಸ್‌ನ ಕೇರಳ ಘಟಕ ಅಧ್ಯಕ್ಷ ಕೆ. ಸುಧಾಕರನ್, ಸಂಸ ದರಾದ ರಾಜ್‌ಮೋಹನ್ ಉಣ್ಣಿ ತ್ತಾನ್, ಶಾಫಿ ಪರಂಬಿಲ್  ಶಾಸಕ ರಾಹುಲ್ ಮಾಕೂ ಟ್ಟತ್ತಿಲ್ ಸೇರಿದಂತೆ ಹಲವು ನೇತಾ ರರು ಭಾಗವಹಿಸಿ  ಮಾತನಾಡುವರು.

RELATED NEWS

You cannot copy contents of this page