ಕೃಷಿಕ ನಾಪತ್ತೆ

ಉಪ್ಪಳ:  ಕೃಷಿಕರೊಬ್ಬರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮೀಂಜ  ಪಂಚಾಯತ್ ಚಾರ್ಲ ದೇರಂಬಳ ಎಂಬಲ್ಲಿನ ದಿ| ಪದ್ಮನಾಭ ಶೆಟ್ಟಿಯವರ ಪುತ್ರ ಹರೀಶ್ ಶೆಟ್ಟಿ (45) ನಾಪತ್ತೆಯಾ ಗಿರುವುದಾಗಿ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ತಿಂಗಳ 7ರಂದು ಬೆಳಿಗ್ಗೆ  ಮೀಯಪದವಿ ಗೆಂದು ತಿಳಿಸಿ ತೆರಳಿದ ಹರೀಶ್ ಶೆಟ್ಟಿ ಮರಳಿ ಮನೆಗೆ ತಲುಪಿಲ್ಲ. ಅವರ ಮೊಬೈಲ್‌ಗೆ    ಫೋನ್ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂ ದಿದೆ. ಇದೇ ವೇಳೆ  ಪೊಲೀಸರು ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಹರೀಶ್ ಶೆಟ್ಟಿ ಯ ಮೊಬೈಲ್ ಫೋನ್ ಮಡಿ ಕೇರಿಯಲ್ಲಿ ಕಾರ್ಯಾಚರಿಸಿರುವುದು ತಿಳಿದುಬಂದಿದೆ.  ಈ ಹಿನ್ನೆಲೆಯಲ್ಲಿ ಸಂಬಂಧಿಕರು ಮಡಿಕೇರಿಗೆ ತೆರಳಿ ಶೋಧ ಕಾರ್ಯ ಆರಂಭಿಸಿದ್ದಾರೆ.

You cannot copy contents of this page