ಕೃಷಿಕರನ್ನು ವಂಚಿಸುವ ಕೇರಳ ಸರಕಾರದ ನೀತಿ ಖಂಡನೀಯ- ಬಿಜೆಪಿ

ಮೀಂಜ: ಈಗಾಗಲೇ ಬೆಳೆ ಕುಸಿತದಿಂದ ನಷ್ಟ ಅನುಭವಿಸಿರುವ ಕೃಷಿಕರನ್ನು ಕೇರಳ ಸರಕಾರ ಹಾಗೂ ಕೆಎಸ್‌ಇಬಿ ಇಲಾಖೆ ಬಹಿರಂಗವಾಗಿ ಲೂಟಿಗೆ ಇಳಿದಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದರು.

ಅನೇಕ ವರ್ಷಗಳಿಂದ ಕೃಷಿಕರ ಉಚಿತ ವಿದ್ಯುತ್ ಸಂಪರ್ಕಗಳಿಗೆ ವಿದ್ಯುತ್ ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೆ 30ಸಾವಿರದಿಂದ 50 ಸಾವಿರದವರೆಗೆ ಪಾವತಿ ಮಾಡುವಂತೆ ಬಿಲ್ ನೀಡಲಾಗಿದ್ದು, ಪಾವತಿಗೆ ಕೆಲವೇ ದಿನಗಳು ಅವಕಾಶ ಎಂದು ಕೃಷಿಕರನ್ನು ಬೆದರಿಸುವ ಪ್ರಕ್ರಿಯೆ ಕೂಡಾ ಇಲಾಖೆಯಿಂದ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಅಡಿಕೆ, ತೆಂಗು ಕಡಿಮೆ ಇಳುವರಿ ಯಿಂದ ಹಾಗೂ ಬೇಸಿಗೆ ಕಾಲದ ನೀರಿನ ಅಭಾವದಿಂದ ಕಂಗೆಟ್ಟಿರುವ ಕೃಷಿಕರಿಗೆ ವಿದ್ಯುತ್ ಇಲಾಖೆಯ ಬಿಲ್ ಸಿಡಿಲೆರಗಿದಂತಾಗಿದೆ. ವಿದ್ಯುತ್ ಇಲಾಖೆ ಈಗಾಗಲೇ ಉಚಿತ ವಿದ್ಯುತ್ ಸಂಪರ್ಕಕ್ಕೆ ನೀಡಿರುವ ಬಿಲ್‌ಗಳನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ಕೃಷಿಕರ ಬೆಂಬಲದೊಂದಿಗೆ ಹೋರಾ ಟಕ್ಕೆ ಬಿಜೆಪಿ ನೇತೃತ್ವ ನೀಡಲಿದೆ ಎಂದು ಆದರ್ಶ್ ಬಿ.ಎಂ. ಹೇಳಿದರು. ಕೇಂದ್ರ ಸರಕಾರ ರೈತರಿಗೆ ಕೃಷಿ ಸಮ್ಮಾನ್, ಕೃಷಿ ವಿಮೆ ಯಂತಹ ಸವಲತ್ತು ನೀಡುತ್ತಿರು ವಾಗ ಕೇರಳ ಸರಕಾರ ಕೃಷಿಕರನಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ನಿಲ್ಲಿಸಲು ಹೊರಟಿರುವುದು ಸರಿಯಲ್ಲ ಎಂದು ಬಿಜೆಪಿ ತಿಳಿಸಿದೆ.

You cannot copy contents of this page