ಕೆ-ಟೆಟ್ ಪ್ರಮಾಣಪತ್ರ ಪರಿಶೀಲನೆ ನಾಳೆಯಿಂದ
ಕಾಸರಗೋಡು: ಶಿಕ್ಷಣ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಕಳೆದ ಎಪ್ರಿಲ್ ತಿಂಗಳ ವಿಜ್ಞಾಪನೆ ಪ್ರಕಾರ ಕೆ-ಟೆಟ್ ಪರೀಕ್ಷೆ ಬರೆದು ಜಯಗಳಿಸಿದವರ ಅರ್ಹತಾ ಪ್ರಮಾಣಪತ್ರಗಳ ಪರಿಶೀಲನೆ ನಾಳೆ, 27ರಂದು ನಡೆಯಲಿದೆ. ಅರ್ಹರಾದ ಪರೀಕ್ಷಾರ್ಥಿಗಳು ಕೆ-ಟೆಟ್ ಅಸಲಿ ಹಾಲ್ ಟಿಕೆಟ್, ಶಿಕ್ಷಣ ಅರ್ಹತೆ ಪ್ರಮಾಣಪತ್ರಗಳ ಅಸಲಿ, ಅಂಕಪಟ್ಟಿ, ಜಾತಿಯ ಸೌಲಭ್ಯಗಳಿಗೆ ಅರ್ಹರಾಗಿದ್ದವರು ಅದನ್ನು ದೃಢೀಕರಿಸುವ ಪ್ರಮಾಣಪತ್ರಗಳು ಹಾಗೂ ಅವುಗಳ ಪ್ರತಿಗಳ ಸಹಿತ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ನೇರವಾಗಿ ಹಾಜರಾಗಬಹುದು. ಕೆಟಗರಿ 1ರಲ್ಲಿ ಒಳಗೊಂಡವರಿಗೆ ನಾಳೆ ಬೆಳಿಗ್ಗೆ 10.30ರಿಂದ 12 ಗಂಟೆ ವರೆಗೂ, ಕೆಟಗರಿ 2ರಲ್ಲಿ ಒಳಗೊಂಡವರಿಗೆ ಮಧ್ಯಾಹ್ನ 12ರಿಂದ 3 ಗಂಟೆ ವರೆಗೂ, ಕೆಟಗರಿ 3ರಲ್ಲಿ ಒಳಗೊಂಡ ವರಿಗೆ 27ರಂದು ಬೆಳಿಗ್ಗೆ 10.30ರಿಂ ದ, ಕೆಟಗರಿ ೪ರಲ್ಲಿ ಒಳಗೊಂಡವರಿಗೆ ಮಧ್ಯಾಹ್ನ 12ರಿಂದ ಪರಿಶೀಲನೆ ನಡೆ ಯಲಿದೆ. ಹಿಂದಿನ ವರ್ಷಗಳಲ್ಲಿ ಕೆ-ಟೆಟ್ ಪರೀಕ್ಷೆ ಬರೆದು ಜಯಗಳಿಸಿ ಪ್ರಮಾಣಪತ್ರ ಪರಿಶೀಲನೆ ಪೂರ್ತಿ ಗೊಳಿಸದವರಿಗೂ ಈ ದಿನಗಳಲ್ಲಿ ಹಾಜರಾಗಬಹುದೆಂದು ಜಿಲ್ಲಾ ಶಿಕ್ಷಣ ಅಧಿಕಾರಿ ತಿಳಿಸಿದ್ದಾರೆ.