ಕೆ.ವಿ. ಕುಮಾರನ್‌ರಿಗೆ ಗೌರವ

ಕಾಸರಗೋಡು: ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದ ಕೆ.ವಿ. ಕುಮಾರನ್‌ರನ್ನು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯ ವತಿಯಿಂದ ಗೌರವಿಸಲಾಯಿತು. ಕುಮಾರನ್ ಮಾಸ್ತರ್‌ರ ವಿದ್ಯಾನಗರದಲ್ಲಿರುವ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಅಧ್ಯಕ್ಷ ವಾಮನ ರಾವ್ ಅಧ್ಯಕ್ಷತೆ ವಹಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್, ವಿಶಾಲಾಕ್ಷ ಪುತ್ರಕಳ, ಗೀತಾ ಚಂದ್ರಮೋಹನ್, ಪ್ರದೀಪ್ ಬೇಕಲ್, ಜಗನ್ನಾಥ ಶೆಟ್ಟಿ, ಸಂಧ್ಯಾರಾಣಿ, ಉಷಾ ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page