ಕೆ.ವಿ.ವಿ.ಇ.ಎಸ್. ನೇತೃತ್ವದಲ್ಲಿ ನಾಳೆ ರಾಜ್ಯಾದ್ಯಂತ ವ್ಯಾಪಾರಿಗಳ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪಾರಿ ದ್ರೋಹ ನೀತಿ ಗೆದುರಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ನಾಳೆ ರಾಜ್ಯಾದ್ಯಂತ ಅಂಗಡಿ ಬಂದ್ ನಡೆಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸುವರು.

ಪ್ಲಾಸ್ಟಿಕ್ ತ್ಯಾಜ್ಯ ಹೆಸರಿನಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಪೀಡಿಸುವ ಕಾನೂನು ಹಿಂತೆಗೆಯಬೇಕು, ಜಿಎಸ್‌ಟಿ, ನ್ಯೂನತೆಗಳ ಹೆಸರಿನಲ್ಲಿ ವ್ಯಾಪಾರಿಗಳಿಗೆ ದಂಡ ವಿಧಿಸುವ ನಿಯಮ ಹಿಂತೆಗೆಯ ಬೇಕು, ಆನ್‌ಲೈನ್ ಬಂಡವಾಳಶಾಯಿ ಗಳನ್ನು ನಿಯಂತ್ರಿಸಬೇಕು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕಾರಣ ವ್ಯಾಪಾರ ನಷ್ಟಹೊಂದಿದ ವ್ಯಾಪಾರಿಗಳಿಗೆ ನಷ್ಟ ಪರಿಹಾರ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ನಾಳೆ ತಿರುವನಂತಪುರದಲ್ಲಿ ಪ್ರತಿಭಟನೆ ಸಂಗಮ ನಡೆಯಲಿದೆ.

ವ್ಯಾಪಾರಿ ಸಂರಕ್ಷಣೆಗೆ ನಡೆಸುವ ಈ ಪ್ರತಿಭಟನೆಯಲ್ಲಿ ರಾಜ್ಯದಾದ್ಯಂತ ವ್ಯಾಪಾರಿಗಳು ಭಾಗವಹಿಸುವರು. ಮಂಜೇಶ್ವರ ಎಲ್ಲಾ ವ್ಯಾಪಾರಿಗಳು ಸಹಕರಿಸಬೇಕೆಂದು ಯೂನಿಟ್ ಅಧ್ಯಕ್ಷ ಬಶೀರ್ ಕನಿಲ, ಉಪ್ಪಳ ಘಟಕ ಅಧ್ಯಕ್ಷ ಅಬುತಮಾಂ ತಿಳಿಸಿದ್ದಾರೆ.

RELATED NEWS

You cannot copy contents of this page