ಕೆಲಸದ ಮಧ್ಯೆ ಕುಸಿದು ಬಿದ್ದ ಪೈಂಟಿಂಗ್ ಕಾರ್ಮಿಕ ನಿಧನ
ಕಾಸರಗೋಡು: ಕುಸಿದು ಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಲುಪಿಸಿದ ಪೈಂಟಿಂಗ್ ಕಾರ್ಮಿಕ ನಿಧನ ಹೊಂದಿದರು. ಕುಂಟಂಗೇರಡ್ಕ ನಿವಾಸಿ ಸುಲೈಮಾನ್ (48) ಮೃತಪಟ್ಟವರು. ಶನಿವಾರ ಸಂಜೆ ಆರಿಕ್ಕಾಡಿಯಲ್ಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ. ಅಲ್ಲಿಂದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡುಹೋಗ ಲಾಗಿತ್ತು. ನಿನ್ನೆ ರಾತ್ರಿ 8ಗಂಟೆಗೆ ಸಾವು ಸಂಭವಿಸಿದೆ. ಇಂದು ಬೆಳಿಗ್ಗೆ ಕುಂಬಳೆ ಬದಲ್ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತರು ಪತ್ನಿ ಫಾಯಿದಾ, ಮಕ್ಕಳಾದ ಫಾಯಿಸ್, ಫಸಲ್ ಹಾಗೂ ಸಹೋದರಿ ಫಾತಿಬಿ, ಸಹೋದರರಾದ ಮುಹಮ್ಮದ್, ಯೂಸಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.