ಕೇಂದ್ರೀಯ ವಿ.ವಿ ಡಾ. ಬಿ.ಆರ್. ಅಂಬೇಡ್ಕರ್ ಭವನ್ ನಾಳೆ ಪ್ರಧಾನಮಂತ್ರಿಯಿಂದ ಉದ್ಘಾಟನೆ
ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ನಿರ್ಮಿಸಲಾದ ಹೊಸ ಆಡಳಿತ ನಿರ್ವಹಣಾ ಕೇಂದ್ರ ಮಂದಿರವಾದ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿ ವರ್ಚುವಲ್ ಮೂಲಕ ಉದ್ಘಾಟಿಸು ವರೆಂದು ಕೇಂದ್ರೀಯ ವಿವಿ ಉಸ್ತುವಾರಿ ಉಪಕುಲಪತಿ ಪ್ರೊ. ಕೆ.ಸಿ. ಬೈಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತದ ೨೨ ರಾಜ್ಯಗಳಲ್ಲಾಗಿ ೩೭ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ರುವ ೧೨,೭೪೪ ಕೋಟಿ ರೂ.ಗಳ ಯೋಜನೆಗಳ ಶಿಲಾನ್ಯಾಸಗಳನ್ನು ಇದರ ಜೊತೆಗೆ ಪ್ರಧಾನಮಂತ್ರಿ ನಿರ್ವಹಿಸುವರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವ ನಿರೀಕ್ಷೆ ಯಿದೆ. ಮಾತ್ರವಲ್ಲದೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ರಾದ ಸಿ.ಎಚ್. ಕುಂಞಂಬು, ಎನ್.ಎ. ನೆಲ್ಲಿಕುನ್ನು, ಒ. ರಾಜಗೋ ಪಾಲನ್, ಇ.ಚಂದ್ರಶೇ ಖರನ್ ಸೇರಿದಂತೆ ಹಲವು ಜನ ಪ್ರತಿನಿಧಿ ಗಳು, ರಾಜಕೀಯ, ಸಾಮಾ ಜಿಕ ಹಾಗೂ ಸಾಂಸ್ಕೃತಿಕ ರಂಗದ ಹಲವು ಗಣ್ಯರು ಭಾಗವಹಿಸುವರು.
ಕಾಸರಗೋಡು ಕೇಂದ್ರೀಯ ವಿವಿಗಾಗಿ ಹೊಸದಾಗಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಒಟ್ಟು ೩೮.೧೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ೬೮,೨೦೦ ಸ್ಕ್ವಾರ್ ಫೀಟ್ ವಿಸ್ತೀರ್ಣ ಹೊಂದಿದೆ. ಕೇಂದ್ರ ಸಚಿವ ವಿ. ಮುರಳೀಧರನ್ ಭಾಗವಹಿಸುವ ಸಾಧ್ಯತೆಯಿದೆಯೆಂದೂ ಉಪಕುಲಪತಿ ತಿಳಿಸಿದ್ದಾರೆ.