ಕೇಂದ್ರೀಯ ವಿ.ವಿ. ಪ್ರಾಧ್ಯಾಪಕನಿಂದ ಅನುಚಿತ ವರ್ತನೆ ಆರೋಪ: ದೂರು ಪೊಲೀಸರಿಗೆ ಹಸ್ತಾಂತರ

ಕಾಸರಗೋಡು: ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಬಿ. ಇಫ್ತಿಕರ ಅಹಮ್ಮದ್ ತನ್ನೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಿ ವಿದ್ಯಾರ್ಥಿನಿಯೋರ್ವೆ ನೀಡಿದ ದೂರನ್ನು ಪ್ರಸ್ತುತ ವಿ.ವಿಯ ಅಧಿಕಾರಿಗಳು ಪರಿಶೀಲಿಸಿ ಅದನ್ನು ಬೇಕಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ದೂರುಗಾರಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಬೇಕಲ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ಹೇಳಿದ್ದಾರೆ. ತನ್ನೊಂದಿಗೆ ನವೆಂಬರ್ ೧೩ರಂದು ಅನುಚಿತವಾಗಿ ವರ್ತಿಸಿರು ವುದಾಗಿ ಆರೋಪಿಸಿ ವಿದ್ಯಾರ್ಥಿನಿ ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ದೂರು ನೀಡಿದ್ದಳು. ಅದನ್ನು ವಿ.ವಿ.ಯ ಆಂತರಿಕ ತನಿಖಾ   ಸಮಿತಿ ಪರಿಶೀಲಿಸಿದ ಬಳಿಕ ಆ ಪ್ರಾಧ್ಯಾಪಕನನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಇದಾದ ಬೆನ್ನಲ್ಲೇ ಆ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

RELATED NEWS

You cannot copy contents of this page