ಕೇರಳ ಎನ್‌ಜಿಒ ಸಂಘ್ ರಾಜ್ಯ ಸಮ್ಮೇಳನಕ್ಕೆ ಚಾಲನೆ

ಕಾಸರಗೋಡು: ಕೇರಳ ಎನ್‌ಜಿಒ ಸಂಘ್‌ನ ೪೫ನೇ ರಾಜ್ಯ ಸಮ್ಮೇಳನಕ್ಕೆ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ಚಾಲನೆ ಲಭಿಸಿದೆ.

ಕಾಸರಗೋಡು ಕೋ-ಆಪರೇ ಟಿವ್ ಟೌನ್ ಬ್ಯಾಂಕ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ ವಿಷಯ ನಿರ್ಣಯ ಸಭೆ ಆರಂಭಗೊಂಡಿತು. ಅಪರಾಹ್ನ 2 ಗಂಟೆಗೆ ಪದಾಧಿಕಾರಿಗಳ ಸಭೆ ನಡೆಯ ಲಿದ್ದು, ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸುವರು.  ಎನ್‌ಒಜಿ ಸಂಘ್ ರಾಜ್ಯ ಉಪಾಧ್ಯಕ್ಷ ಆರ್. ಶ್ರೀಕಮಾ ರನ್ ಅಧ್ಯಕ್ಷತೆ ವಹಿಸುವರು.  ನಾಳೆ ಬೆಳಿಗ್ಗೆ 9.45ಕ್ಕೆ ಕಾಸರಗೋಡು ಮುನಿಸಿಪಲ್ ಟೌನ್ ಹಾಲ್‌ನ ಸ್ವರ್ಗೀಯ ಗೋಪಾಲ ಚೆಟ್ಟಿಯಾರ್ ನಗರದಲ್ಲಿ ಧ್ವಜಾರೋಹಣದೊಂದಿಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಸಂಘದ ರಾಜ್ಯ ಅಧ್ಯಕ್ಷ ಟಿ.ಎನ್. ರಮೇಶ್ ಅಧ್ಯಕ್ಷತೆ ವಹಿಸುವರು. ಸಮ್ಮೇನವನ್ನು ರಾಜ್ಯ ಸಮ್ಮೇಳನವನ್ನು ಬಿಎಂಎಸ್ ಅಖಿಲ ಭಾರತ ಅಧ್ಯಕ್ಷ ಕಿರಣ್‌ಮಯ್  ಪಾಂಡ್ಯ ಉದ್ಘಾಟಿಸು ವರು. ಹಲವರು ಉಪಸ್ಥಿತರಿರುವರು. ಮಧ್ಯಾಹ್ನ 12ಕ್ಕೆ ಬೀಳ್ಕೊಡುಗೆ, ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಎಂಎಸ್ ರಾಜ್ಯಾಧ್ಯಕ್ಷ  ಶಿವಜಿ ಸುದರ್ಶನನ್ ಉದ್ಘಾಟಿಸುವರು. ಅಪರಾಹ್ನ 2 ಗಂಟೆಗೆ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೌದ್ಧಿಕ್ ಪ್ರಮುಖ್ ಕೆ.ಪಿ. ರಾಧಾಕೃಷ್ಣನ್ ಉದ್ಘಾಟಿಸುವರು. 4 ಗಂಟೆಗೆ ಮೆರವಣಿಗೆ, 5 ಗಂಟೆಗೆ ಸಾರ್ವ ಜನಿಕ ಸಮ್ಮೇಳನ ನಡೆಯಲಿದೆ. ಆರ್‌ಆರ್‌ಕೆ ಎಂಎಸ್ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಕೆ. ಜಯಕುಮಾರ್ ಉದ್ಘಾಟಿಸು ವರು. 7.30ಕ್ಕೆ ಕಲಾಸಂಜೆ ನಡೆಯಲಿದೆ. 13ರಂದು ಬೆಳಿಗ್ಗೆ 8.30ಕ್ಕೆ ರಾಜ್ಯ ಕೌನ್ಸಿಲ್ ಸಭೆ ಜರಗಲಿದೆ.

You cannot copy contents of this page