ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಹಾಸಭೆ; ನೂತನ ಸಮಿತಿ ರೂಪೀಕರಣ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಾರ್ಷಿಕ ವರದಿ, ಕೋಶಾಧಿಕಾರಿ ಪದ್ಮಾವತಿ ಎಂ ಲೆಕ್ಕ ಪತ್ರ ಮಂಡಿ ಸಿದರು. ಬಳಿಕ ಸಂಘಟನಾತ್ಮಕ ಚರ್ಚೆ ನಡೆಯಿತು. ಬೇಕಲ-ಹೊಸ ದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷೆ ರಜನಿ ಕುಮಾರಿ ಪಿ, ಕಾಸರ ಗೋಡು ಉಪಜಿಲ್ಲಾ ಅಧ್ಯಕ್ಷ ವಿನೋದ್ ರಾಜ್ ಪಿ.ಕೆ, ಕಾರ್ಯ ದರ್ಶಿ ಬಾಬು ಕೆ, ಮಂಜೇಶ್ವರ ಉಪ ಜಿಲ್ಲಾ ಕಾರ್ಯದರ್ಶಿ ಜೀವನ್ ಕುಮಾರ್ ಚರ್ಚೆಯಲ್ಲಿ ಭಾಗವಹಿ ಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾದ ಸುಕೇಶ್ ಎ, ಪ್ರಭಾವತಿ ಕೆದಿಲಾಯ, ಸಂಘಟನಾ ಕಾರ್ಯ ದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಅಧ್ಯಕ್ಷರಾಗಿ ಬಾಕ್ರಬೈಲು ಪಾತೂರಿನ ಎ.ಯು.ಪಿ. ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ ರಾವ್ ಪಿ.ಬಿ ಪುನರಾಯ್ಕೆಯಾದರೆ ಪ್ರಧಾನ ಕಾರ್ಯದರ್ಶಿಯಾಗಿ ಕಿಳಿಂಗಾರಿನ ಎ.ಎಲ್.ಪಿ.ಶಾಲೆ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಯಾಗಿ ಎ.ಎಸ್.ಬಿ.ಎಸ್.ಕುಂಟಿ ಕಾನದ ಶಿಕ್ಷಕ ಶರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನವಜೀವನ ಪ್ರೌಢ ಶಾಲೆಯ ಶಿಕ್ಷಕಿ ಪ್ರಭಾವತಿ ಕೆದಿಲಾಯ, ವಿದ್ಯಾರಣ್ಯ ಎ.ಎಲ್.ಪಿ. ಶಾಲೆ ಬೆರಿಪದವಿನ ಮುಖ್ಯ ಶಿಕ್ಷಕ ಉಮೇಶ್ ಕೆ, ಕಾರ್ಯದರ್ಶಿಗಳಾಗಿ ಜಿ.ಎಲ್.ಪಿ.ಶಾಲೆ ಕುಳೂರಿನ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಜಿ.ಎಚ್.ಎಸ್.ಎಸ್.ಬಂದಡ್ಕದ ಶಿಕ್ಷಕ ಬಾಬು ಕೆ, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಡಬ್ಲ್ಯೂ. ಎಲ್.ಪಿ.ಶಾಲೆ ಮಂಜೇಶ್ವರದ ಶಿಕ್ಷಕ ಜಬ್ಬಾರ್ ಬಿ, ಅಧಿಕೃತ ವಕ್ತಾರರಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಮುಖ್ಯ ಶಿಕ್ಷಕ ಸುಕೇಶ್, ಲೆಕ್ಕ ಪರಿಶೋಧಕರಾಗಿ ಜಿ.ಎಲ್.ಪಿ.ಶಾಲೆ ಪನೆಯಾಲದ ಶಿಕ್ಷಕ ಪುರುಷೋತ್ತಮ ಕುಲಾಲ್ ಹಾಗೂ ಜಿ.ಎಚ್.ಎಸ್.ಎಸ್. ಕಾಸರಗೋಡಿನ ಶಿಕ್ಷಕ ಅಬ್ದುಲ್ ರಹಿಮಾನ್ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಜಯ ಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಜಬ್ಬಾರ್ ಬಿ ಕಾರ್ಯಕ್ರಮ ನಿರೂಸಿದರು.

RELATED NEWS

You cannot copy contents of this page