ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಅಕ್ಷಯ, ವಿನ್-ವಿನ್, ಫಿಫ್ಟಿ-ಫಿಫ್ಟಿ, ಮತ್ತು ನಿರ್ಮಲ್ ಎಂಬೀ ಹೆಸರುಗಳನ್ನು ಬದಲಾ ಯಿಸಲು ಲಾಟರಿ ಇಲಾಖೆ ತೀರ್ಮಾನಿಸಿದೆ. ಇದರಂತೆ ಈ ಲಾಟರಿ ಟಿಕೆಟ್ಗಳ ಹೆಸರನ್ನು ಇನ್ನು ಅನುಕ್ರಮವಾಗಿ ಸಂವೃದ್ಧಿ, ಧನಲಕ್ಷ್ಮಿ, ಭಾಗ್ಯಧಾರ ಹಾಗೂ ಸುವರ್ಣ ಕೇರಳಂ ಎಂದಾಗಿ ಬದಲಾಯಿಸ ಲಾಗುವುದು. ಮಾತ್ರವಲ್ಲ ಈ ಎಲ್ಲಾ ಲಾಟರಿ ಟಿಕೆಟ್ಗಳ ದರವನ್ನು ಈಗಿರುವ 40 ರೂ.ನಿಂದ 50 ರೂ.ಗೇರಿಸಲು ತೀರ್ಮಾನಿಸ ಲಾಗಿದೆ. ಇವುಗಳ ಪ್ರಥಮ ಬಹುಮಾನ ಮೊತ್ತವನ್ನು ಒಂದು ಕೋಟಿ ರೂ.ಗೇರಿಸುವ ತೀರ್ಮಾನ ವನ್ನೂ ಇಲಾಖೆ ಕೈಗೊಂಡಿದೆ. ಈ ತಿಂಗಳೊಳಗಾಗಿ ಇದನ್ನು ಜ್ಯಾರಿ ಗೊಳಿಸಲು ಇಲಾಖೆ ತೀರ್ಮಾನಿ ಸಿದೆ. ಕನಿಷ್ಠ ಬಹುಮಾನ ಮೊತ್ತವನ್ನು 100 ರೂ.ನಿಂದ 50 ರೂ.ಗಿಳಿಸ ಲಾಗಿದೆ. ಪ್ರತಿದಿನ 1.08 ಕೋಟಿ ಲಾಟರಿ ಟಿಕೆಟ್ಗಳನ್ನು ಮುದ್ರಿಸಲಾ ಗುತ್ತಿದೆ. ಇವುಗಳಲ್ಲಿ ಒಟ್ಟಾರೆಯಾಗಿ 24.12 ಕೋಟಿ ರೂ.ಗಳ ಬಹು ಮಾನ ವಿತರಿಸಲಾಗುತ್ತಿದೆ. ಪ್ರಥಮ ಬಹುಮಾನದ ಹೊರತಾಗಿ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನೂ ಹೆಚ್ಚಿಸಲು ತೀರ್ಮಾನಿಸಲಾಗಿದೆ.
