ಕೇರಳ ಲಾಟರಿ: ಇನ್ನು ಮುಂದೆ ಪ್ರಥಮ ಬಹುಮಾನ ೧ಕೋಟಿ ರೂ. ಟಿಕೆಟ್‌ಗೆ 50ರೂ.

ಕಾಸರಗೋಡು: ಒಂದು ಕೋಟಿ ರೂಪಾಯಿ ಪ್ರಥಮ ಬಹುಮಾನ ವುಳ್ಳ 50 ರೂಪಾಯಿಯ ನೂತನ ಲಾಟರಿ ಟಿಕೆಟ್‌ನ ಮೊದಲ ಡ್ರಾ ಮೇ 2ರಂದು ನಡೆಯಲಿದೆ. ಶುಕ್ರವಾರದ ‘ಸುವರ್ಣ ಕೇರಳಂ’ ಟಿಕೆಟ್ ಡ್ರಾ ಅಂದು ನಡೆಯಲಿ ರುವುದು ದ್ವಿತೀಯ ಬಹುಮಾನ 30 ಲಕ್ಷ ರೂಪಾಯಿ, ತೃತೀಯ ಬಹುಮಾನ 25 ಲಕ್ಷ ರೂಪಾಯಿ ಆಗಿರುವುದು.

ರಾಜ್ಯದಲ್ಲಿ ಏಳು ಲಾಟರಿ ಟಿಕೆಟ್‌ಗಳ ಪ್ರಥಮ ಬಹುಮಾನ ಒಂದು ಕೋಟಿ ರೂಪಾಯಿಯಾಗಿ ನಿಗದಿಪಡಿಸಿದ್ದಲ್ಲದೆ ಟಿಕೆಟ್ ದರವನ್ನು 50 ರೂಪಾಯಿಗೇರಿಸಿ ಲಾಟರಿ ಇಲಾಖೆ ಆದೇಶ ಹೊರಡಿ ಸಿದೆ. ಇದೇ ವೇಳೆ ನಾಲ್ಕು ಲಾಟರಿಗಳ ಹೆಸರು ಬದಲಿಸಲಾಗಿದೆ. ನಿರ್ಮಲ್ ಲಾಟರಿಯನ್ನು ಸುವರ್ಣ ಕೇರಳ ಎಂದು ಬದಲಾವಣೆ ಮಾಡಲಾಗಿದೆ. ಎಲ್ಲಾ ಟಿಕೆಟ್ ಗಳಲ್ಲೂ ಕನಿಷ್ಠ ಬಹುಮಾನ ಮೊತ್ತ ಟಿಕೆಟ್ ಬೆಲೆಯಾದ ೫೦ ರೂಪಾಯಿ ಆಗಿರುವುದು. ಇದವರೆಗೆ ಬುಧವಾರ ಡ್ರಾ ನಡೆಯುತ್ತಿದ್ದು, 50 ರೂಪಾಯಿಯ ಫಿಫ್ಟಿ ಫಿಫ್ಟಿ ಟಿಕೆಟ್‌ನಲ್ಲಿ ಮಾತ್ರವೇ ಒಂದು ಕೋಟಿ ರೂಪಾಯಿ ಪ್ರಥಮ ಬಹುಮಾನವಿತ್ತು.

RELATED NEWS

You cannot copy contents of this page