ಕೇರಳದ 12 ಕ್ಷೇತ್ರಗಳಲ್ಲಿ ಎನ್ಡಿಎ ಉಮೇದ್ವಾರರು
ತಿರುವನಂತಪುರ: ಕೇರಳದ ಒಟ್ಟು ೨೦ ಲೋಕಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಉಮೇದ್ವಾರರನ್ನಾಗಿ ೧೨ ಮಂದಿಯನ್ನು ಬಿಜೆಪಿ ಘೋಷಿಸಿದೆ. ಇದರಂತೆ ಕಾಸರಗೋಡಿನಲ್ಲಿ ಎಂ.ಎಲ್. ಅಶ್ವಿನಿ, ತಿರುವನಂತಪುರ- ಕೇಂದ್ರಸಚಿವ ರಾಜೀವ್ ಚಂದ್ರಶೇಖರನ್, ಅಟ್ಟಿಂಗಾಲ್- ಕೇಂದ್ರ ಸಚಿವ ವಿ. ಮುರಳೀಧರನ್, ಆಲಪ್ಪುಳ- ಶೋಭಾ ಸುರೇಂದ್ರನ್, ಪತ್ತನಂತಿಟ್ಟ- ಕಾಂಗ್ರೆಸ್ನ ಹಿರಿಯ ನೇತಾರ ಎ.ಕೆ. ಆಂಟನಿ ಅವರ ಮಗ ಅನಿಲ್ ಆಂಟನಿ ಮತ್ತು ತೃಶೂರಿನಲ್ಲಿ ಎಲ್ಲರೂ ನಿರೀಕ್ಷಿಸದಂತೆ ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಸುರೇಶ್ ಗೋಪಿಯವರನ್ನು ತಮ್ಮ ಉಮೇದ್ವಾರರನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಇದರ ಹೊರತಾಗಿ ಪಾಲ್ಘಾಟ್ನಲ್ಲಿ ಸಿ. ಕೃಷ್ಣ ಕುಮಾರ್, ಪೊನ್ನಾನಿ- ನ್ಯಾಯವಾದಿ ನಿವೇದಿತ ಸುಬ್ರಹ್ಮಣ್ಯನ್, ಮಲಪ್ಪುರಂ- ಡಾ. ಎಂ. ಅಬ್ದುಲ್ ಸಲಾಂ, ಕಲ್ಲಿಕೋಟೆ- ಎಂ.ಟಿ. ರಮೇಶ್, ವಡಗರೆ- ಸಿ.ಆರ್. ಪ್ರಫುಲ್ಕೃಷ್ಣನ್ ಮತ್ತು ಕಣ್ಣೂರಿನಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಸಿ. ರಘುನಾಥ್ರನ್ನು ಬಿಜೆಪಿ ಕಣಕ್ಕಿಳಿಸಿದೆ.