ಕೇರಳದಲ್ಲಿ ಮಳೆ ಮುಂದುವರಿಕೆ : ಮೂರು ದಿನ ಯೆಲ್ಲೋ ಅಲರ್ಟ್
ಕಾಸರಗೋಡು: ರಾಜ್ಯದ ವಿವಿಧೆಡೆಗಳಲ್ಲಿ ಅತೀ ತೀವ್ರ ಮಳೆ ಸುರಿಯುತ್ತಿದೆ. ಕೇರಳ ಕರಾವಳಿ ಬಳಿಯಿಂದ ಗುಜರಾತ್ ಕರಾವಳಿವರೆಗೆ ವಾಯುಭಾರ ಕುಸಿತ ಸೃಷ್ಟಿಯಾ ಗಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಯೊಳಗೆ ಝಾರ್ಖಂಡ್‌ನಲ್ಲಿ, ಕರಾವಳಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಲಿದೆಯೆಂದು ತಿಳಿಸಲಾಗಿದೆ. ಇದರ ಫಲವಾಗಿ ಕೇರಳದಲ್ಲಿ ನಾಳೆವರೆಗೆ ಅತೀ ತೀವ್ರ ಮಳೆ ಸುರಿಯುವ ಸಾಧ್ಯತೆ ಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ ಜಿಲ್ಲೆಗಳಲ್ಲಿ ‘ಯೆಲ್ಲೋ’ ಅಲರ್ಟ್ ಮುಂದು ವರಿಯುತ್ತಿದೆ. ದಕ್ಷಿಣದ ಜಿಲ್ಲೆಗಳ ಕೆಲವೆಡೆ ಧಾರಾಕಾರ ಮಳೆಯಾಗಲಿದೆ. ಕಳೆದ ದಿನಗಳಲ್ಲಿ ಧಾರಾಕಾರ ಮಳೆ ಸುರಿದ ಪ್ರದೇಶಗಳಲ್ಲಿ ಜಾಗ್ರತೆ ಪಾಲಿಸಬೇಕಾಗಿದೆ. ಭೂಕುಸಿತ, ಪರ್ವತಗಳಿಂದ ಮಳೆನೀರು ಹರಿದು ಬರಲು ಸಾಧ್ಯತೆಯಿರುವ ಪ್ರದೇಶ ಗಳಿಂದ ಜನರು ಬೇರೆಡೆಗೆ ತೆರಳಿ ವಾಸಿಸಬೇಕಾಗಿದೆ. ಕೇರಳ ಕರಾವಳಿಯಲ್ಲಿ ನಾಳೆ ಎತ್ತರದಲ್ಲಿ ಸಮುದ್ರದ ಅಲೆ ಬೀಸುವ ಸಾಧ್ಯತೆ ಇದೆ. ಮೀನು ಕಾರ್ಮಿಕರು ಜಾಗ್ರತೆ ಪಾಲಿಸಬೇಕೆಂದು ತಿಳಿಸಲಾಗಿದೆ.