ಕೊಡಂಗೆಯಲ್ಲಿ ಕೋಳಿ ಅಂಕ: ಮೂವರ ಬಂಧನ; 98,010 ರೂ. ವಶ
ಉಪ್ಪಳ: ಸೋಂಕಾಲು ಬಳಿಯ ಕೊಡಂಗೆಯಲ್ಲಿ ನಡೆಯುತ್ತಿದ್ದ ಬೃಹತ್ ಕೋಳಿ ಅಂಕಕ್ಕೆ ಮಂಜೇಶ್ವರ ಪೊಲೀ ಸರು ದಾಳಿ ನಡೆಸಿ ಮೂರು ಮಂದಿ ಯನ್ನು ಬಂಧಿಸಿದ್ದಾರೆ. ಈ ವೇಳೆ ಸ್ಥಳದ ಲ್ಲಿದ್ದ ನೂರಾರು ಮಂದಿ ಓಡಿ ಪರಾರಿ ಯಾಗಿದ್ದಾರೆ. ಸ್ಥಳದಿಂದ 98,010 ರೂ ಪಾಯಿಗಳನ್ನು ಹಾಗೂ 8 ಕೋಳಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಪುತ್ತೂರು ಕಾವು ನಿವಾಸಿ ಭವಾನಿಶಂಕರ ಕೆ (30), ಮಜಿಬೈಲು ಮಟ್ಟುಮಾರ್‌ಕಟ್ಟೆಯ ಸಂತೋಷ್ ಕುಮಾರ್ (42), ಮುಂಬೈ ಅಂಧೇ ರಿಯ ಗಣೇಶ್ ಸುಂದರ್ ಕೆ (53) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಕೊಡಂಗೆಯ ಸಾರ್ವಜನಿಕ ಸ್ಥಳದಲ್ಲಿ ನಿನ್ನೆ ಸಂಜೆ 3.30ರ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಸಿಐ ಅನೂಬ್ ಕುಮಾರ್, ಎಸ್‌ಗಳಾದ ರತೀಶ್, ಅಜಯ್ ಎಸ್ ಮೆನೋನ್, ಜ್ಯೂನಿಯರ್ ಎಸ್‌ಐ ಅತುಲ್ ರಾಮ್ ಮೊದಲಾದವರ ನೇತೃತ್ವದಲ್ಲಿ ಪೊಲೀಸರು ಮಫ್ತಿ ವೇಷ ದಲ್ಲಿ ಅಲ್ಲಿಗೆ ದಾಳಿ ನಡೆಸಿದ್ದರು. ಪೊಲೀಸರು ಅಲ್ಲಿಗೆ ತಲುಪಿದೊಡನೆ ಅಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಮಂದಿ ಓಡಿ ಪರಾರಿಯಾಗಿದ್ದಾರೆನ್ನಲಾಗಿದೆ.