ಕೊನೆಗೂ ನೂರುದ್ದೀನ್‌ರ ಮನೆಗೆ ರಸ್ತೆ ರೆಡಿ: ರೋಗಿಯಾದ ತಾಯಿಯನ್ನು ಹೊತ್ತೊಯ್ಯಬೇಕಾದ ಸ್ಥಿತಿ ಇನ್ನಿಲ್ಲ
ಬದಿಯಡ್ಕ: ಮನೆಗೆ ರಸ್ತೆ ಮಂಜೂರು ಮಾಡಬೇಕೆಂಬ ಪಳ್ಳತ್ತಡ್ಕದ ನೂರುದ್ದೀನ್‌ರ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಪರಿಹಾರವುಂ ಟಾಗಿದೆ. ರೋಗಿಯಾದ ತಾಯಿಯನ್ನು ಇನ್ನು ಹೊತ್ತುಕೊಂಡು ಹೋಗಬೇ ಕಾಗಿಲ್ಲ. ರಸ್ತೆಗಾಗಿ ನೂರುದ್ದೀನ್ ಅದಲಿಬದಲಿ ಪಂಚಾ ಯತ್ ಆಡಳಿತ ಸಮಿತಿಯಲ್ಲೂ, ಜನಪ್ರತಿನಿಧಿಗಳಲ್ಲೂ ಬೇಡಿಕೊಂ ಡರೂ ಫಲವುಂಟಾಗಿರಲಿಲ್ಲ. ಈಗಿನ ಪಂ. ಸದಸ್ಯೆ ನೂರುದ್ದೀನ್‌ರ ಕುಟುಂಬದ ಸಂಕಷ್ಟ ಕಂಡು ಮರುಗಿ ಪರಿಹಾರ ಕಂಡುಕೊಂಡಿದ್ದಾರೆ. ಬದಿಯಡ್ಕ ಪೆರ್ಲ ರಸ್ತೆಯ ಪಳ್ಳತ್ತಡ್ಕ ರೇಶನ್ ಅಂಗಡಿ ಬಳಿಯಲ್ಲಿ ನೂರು ದ್ದೀನ್ ಸ್ವಂತ ಸ್ಥಳದಲ್ಲಿ ರಸ್ತೆ ನಿರ್ಮಿ ಸಿರುವುದು. ಈ ಮೊದಲು ಹಲವು ಅಡೆತಡೆಗಳು ಉಂಟಾದ ಕಾರಣ ರಸ್ತೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ.
ರೋಗಿಯಾದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಹೋಗ ಬೇಕಾಗಿತ್ತು. ಇದನ್ನು ಕಂಡ ಐದನೇ ವಾರ್ಡ್ ಪ್ರತಿನಿಧಿ ಜ್ಯೋತಿ ಕಾರ್ಯಾಡ್ ಇತರ ಜನಪ್ರತಿನಿಧಿ ಗಳೊಂದಿಗೆ ತಲುಪಿ ಜೆಸಿಬಿ ಉಪ ಯೋಗಿಸಿ ಡ್ರೈನೇಜ್ ಸಿದ್ಧಪಡಿಸಿದ್ದು, ಜೊತೆಗೆ ಮಣ್ಣನ್ನು ತೆರವುಗೊಳಿಸಿ ರಸ್ತೆ ಸೌಕರ್ಯವನ್ನು ಮಾಡಲಾಗಿದೆ. ಪಂ. ಸದಸ್ಯೆಯ ಈ ಕಾರ್ಯ ಜನರೆಡೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.