ಕೊಮ್ಮಂಗಳದಲ್ಲಿ ಸೋಲಾರ್ ವಿದ್ಯುತ್ ಸಾಕಷ್ಟಿದೆ: ಸ್ಥಳೀಯರಿಗೆ ಮಾತ್ರ ವೋಲ್ಟೇಜ್ ಸಮಸ್ಯೆ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕೊಮ್ಮಂಗಳ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರದೇಶದ ಪರಿಸರದಲ್ಲೇ ವಿದ್ಯುತ್ ಸಮಸ್ಯೆಯಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿ ದ್ದಾರೆ. ಹಲವು ವರ್ಷಗಳಿಂದ ಇಲ್ಲಿ ವೋಲ್ಟೇಜ್ ಸಮಸ್ಯೆ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಸೋಲಾರ್ ಮೂಲಕ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾದರೂ ಈ ಪರಿಸರದವರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಮ್ಮಂಗಳ ಸೋಲಾರ್ ಪ್ಲಾಂಟ್ ಸಮೀಪದಲ್ಲಿರುವ ಟ್ರಾನ್ಸ್‌ಫಾರ್ಮರ್‌ನಿಂದ ವೋಲ್ಟೇಜ್ ಸಮಸ್ಯೆ ಕಂಡು ಬರುತ್ತಿದೆ. ಕೊಮ್ಮಂಗಳ, ಕುರಿಯ, ಕೊರತಿಪಾರೆ, ಪಾರೆಕೋಡಿ ಮೊದಲಾದ ಪ್ರದೇಶಗಳ ಸುಮಾರು 200ರಷ್ಟು ಮನೆಗಳಿಗೆ ಕೊಮ್ಮಂಗಳ ಟ್ರಾನ್ಸ್‌ಫಾರ್ಮರ್‌ನಿಂದ ಸಂಪರ್ಕ ನೀಡಲಾಗಿದೆ. ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ಇಷ್ಟು ಮನೆಗಳಿಗೆ ವಿದ್ಯುತ್ ಸರಬರಾಜು ಆಗುತ್ತಿರುವುದೇ ವೋಲ್ಟೇಜ್ ಸಮಸ್ಯೆಗೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ  ಕೃಷಿಕರೇ ಹೆಚ್ಚಾಗಿದ್ದಾರೆ.

ಕೃಷಿ ಸ್ಥಳಗಳಿಗೆ ನೀರು ಹಾಯಿಸಲು ಮೋಟಾರು ಚಲಾವಣೆಗೆ ಸಮಸ್ಯೆ ಉಂಟಾಗುತ್ತಿದೆ. ಹೆಚ್ಚಿನ ಮನೆಗಳಲ್ಲಿ ಮಿಕ್ಸಿ ಉಪಯೋಗಿಸಲು ಕೂಡಾ ಸಾಧ್ಯವಾಗುತ್ತಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನೊಂದು ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿ ವೋಲ್ಟೇಜ್ ಸಮಸ್ಯೆ ಪರಿಹರಿಸಬೇಕೆಂದು ವರ್ಷಗಳ ಹಿಂದೆಯೇ ಸ್ಥಳೀಯರು ಪೈವಳಿಕೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ಈ ಬಗ್ಗೆ ವಿಚಾರಿಸಿದರೆ ಶೀಘ್ರ ಸರಿಪಡಿಸುವುದಾಗಿ ತಿಳಿಸುತ್ತಿದ್ದಾರೆಂದು ಆದರೆ ಇದುವರೆಗೂ ಯಾವುದೇ ಫಲ ಉಂಟಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

RELATED NEWS

You cannot copy contents of this page