ಕೊಯಂಬತ್ತೂರಿನಲ್ಲಿ ೭ ಜನ ಮೃತಪಟ್ಟ ಕುಟುಂಬದ ಸದಸ್ಯ ನಿಧನ
ಪೆರ್ಮುದೆ: ಇಲ್ಲಿನ ಚೇವಾರು -ಕಯ್ಯಾರು ಮಧ್ಯದ ಕುಡಾಲುಮೇರ್ಕಳ ಮಂಡೆಕಾಪು ನಿವಾಸಿ ದಿ| ಬೆಂಜಮಿನ್ ಮೊಂತೇರೋರವರ ಪುತ್ರ ಜೋನ್ ಜೋಸೆಫ್ ಮೊಂತೇರೋ (೫೫) ನಿನ್ನೆ ರಾತ್ರಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉದ್ಯಮಿಯಾಗಿರುವ ಇವರು ಕೆಲವು ವರ್ಷಗಳ ಹಿಂದೆ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ೭ ಜನ ಮೃತಪಟ್ಟ ಕುಟುಂಬದ ಸದಸ್ಯರಾಗಿದ್ದಾರೆ. ತಾಯಿ ಮೇರಿ ಮೊಂತೇರೋ, ಪತ್ನಿ ವೆರೋಣಿಕ, ಮಕ್ಕಳಾದ ಜೋಯ್ಸನ್, ಸಲ್ಮಾನ್, ಸಹೋದರರಾದ ಡೆನ್ಸಿಲ್ ಮೊಂತೇರೋ, ಪ್ರಕಾಶ್‌ಚಂದ್ರ ಮೊಂತೇರೋ, ಪ್ರೇಮ್ ಪ್ರಕಾಶ್ ಮೊಂತೇರೋ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.