ಕೊಯಿಪ್ಪಾಡಿ ಕಡಲ ತೀರದಲ್ಲಿ ಸಮುದ್ರಪೂಜೆ

ಕುಂಬಳೆ: ಕುಂಬಳೆ ಶ್ರೀ ವೀರವಿಠಲ ದೇವಸ್ಥಾನದ ವತಿಯಿಂದ ನಿಜ ಶ್ರಾವಣ ಮಾಸದ ಚತುರ್ದಶಿ ದಿನದಂಗವಾಗಿ ದೇವಳದ ಪ್ರಧಾನ ಅರ್ಚಕ ಶ್ರೀ ವೇದಮೂರ್ತಿ ಕೆ. ಪುಂಡಲೀಕ್ ಭಟ್‌ರ ನೇತೃತ್ವದಲ್ಲಿ ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ಕಡಲ ತೀರದಲ್ಲಿ  ಶ್ರೀ ವಿಷ್ಣು ದೇವರ ಪ್ರೀತಿಗಾಗಿ ಸಮುದ್ರರಾಜನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಹಾಲು, ಅರಸಿನ-ಕುಂಕುಮ, ತೆಂಗಿನಕಾಯಿ, ನಾಣ್ಯಗಳು, ಸೀಯಾಳ, ಅಡಿಕೆ, ಫಲವಸ್ತುಗಳು ಹಾಗೂ ವೀಳ್ಯದೆಲೆ ಯನ್ನು ಸಮುದ್ರರಾಜನಿಗೆ ಸಮರ್ಪಿಸ ಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ಕೆ. ನಾರಾಯಣ ಪ್ರಭು ಹಾಗೂ ಆಡಳಿತ ಮಂಡಳಿ ಸದಸ್ಯರು, ಸಮಾಜಬಾಂ ಧವರು ಉಪಸ್ಥಿತರಿದ್ದರು.

You cannot copy contents of this page