ಕೊರಿಯರ್ ಮೂಲಕ ತಲುಪಿದ ಗಾಂಜಾ ಮಿಠಾಯಿ ಪಡೆಯಲು ಬಂದ ವಿದ್ಯಾರ್ಥಿ ಸೆರೆ
ಕಾಸರಗೋಡು:ಕೊರಿಯರ್ ಪಾರ್ಸೆಲ್ ಮೂಲಕ ಬಂದ ಗಾಂಜಾ ಮಿಠಾಯಿಯನ್ನು ಕೊರಿಯರ್ ಸಂಸ್ಥೆಯಿಂದ ಪಡೆಯಲು ಬಂದ ವಿದ್ಯಾರ್ಥಿಯನ್ನು ಅಬಕಾರಿ ತಂಡ ಬಂಧಿಸಿದೆ.
ಕಾಞಂಗಾಡ್ ಸೌತ್ ತೆಕ್ಕೇ ವಳಪ್ಪಿನ ದಿಲ್ಜಿತ್ (19) ಬಂಧಿತ ವಿದ್ಯಾರ್ಥಿ. ಕೊರಿಯರ್ ಮೂಲಕ ಬಂದ ಎರಡು ಪಾರ್ಸೆಲ್ಗಳನ್ನು ಆತ ಪಡೆಯಲು ಬಂದಾಗ ಅಬಕಾರಿ ತಂಡ ವಶಕ್ಕೆ ಆ ಎರಡು ಪಾರ್ಸೆಲ್ ಗಳನ್ನು ವಶಕ್ಕೆ ತೆಗೆದು ಪರಿಶೀಲಿಸಿ ದಾಗ ಅದರಲ್ಲಿ 448 ಗ್ರಾಂ ಗಾಂಜಾ ಮಿಠಾಯಿ ಪತ್ತೆಯಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸದುರ್ಗ ವೆಳ್ಳಿಕ್ಕೋತ್ತ್ನಲ್ಲಿರುವ ಕೊರಿಯರ್ ಸಂಸ್ಥೆಗೆ ಈ ಪಾರ್ಸೆಲ್ ಬಂದಿತ್ತು. ಆ ಬಗ್ಗೆ ಮಾಹಿತಿ ಲಭಿಸಿದ ಹೊಸದುರ್ಗ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಜಿಷ್ಣು ಕುಮಾರ್ ನೇತೃತ್ವದ ಅಬಕಾರಿ ತಂಡ ನಿನ್ನೆ ಅಲ್ಲಿಗೆ ಸಾಗಿ ಪಾರ್ಸೆಲ್ ಸಹಿತ ಅದನ್ನು ಪಡೆಯಲು ಬಂದ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಇದೇ ರೀತಿ ಈ ಹಿಂದೆಯೂ ಹಲವು ಬಾರಿ ಇಂತಹ ಪಾರ್ಸೆಲ್ ತಲು ಪಿತ್ತೆಂಬುದು ತನಿಖೆಯಲ್ಲಿ ತಿಳಿದುಬಂದಿ ದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶದಿಂದ ಪಾರ್ಸೆಲ್ ಇಲ್ಲಿಗೆ ತಲುಪಿದೆ. ಬಂಧಿತನು ಶಿಕ್ಷಣ ಸಂಸ್ಥೆ ಮತ್ತು ಇತರರಿಗೆ ಗಾಂಜಾ ಮಿಠಾಯಿ ಹಾಗೂ ಇತರ ಮಾದಕ ದ್ರವ್ಯವನ್ನು ವಿತರಿಸುವ ಜಾಲದ ಕೊಂಡಿಯಾಗಿ ದ್ದಾನೆಂದು ಆತನನ್ನು ವಿಚಾರಣೆಗೊಳ ಪಡಿಸಿದಾಗ ಸ್ಪಷ್ಟ ಗೊಂಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ ಗ್ರೇಡ್ ರಾಜೀವನ್ ಪಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಅಬ್ದುಲ್ ಸಲಾಂ, ಕೆ.ಪಿ.ಸಂತೋಷ್ ಕುಮಾರ್, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಚಾರ್ಲ್ಸ್ ಜೋಸ್, ಅನೀಶ್ ಕೆ.ವಿ, ಅಜೂಬ್ ವಿ.ವಿ ಮತ್ತು ಚಾಲಕ ಸುಧೀರ್ ಕುಮಾರ್ ಕೆ ಎಂಬಿವರು ಒಳಗೊಂಡಿದ್ದರು.