ಕೊಲೆ ಪ್ರಕರಣದ ಆರೋಪಿಯ ತಂದೆ ನೇಣು ಬಿಗಿದು ಆತ್ಮಹತ್ಯೆ

ಕಣ್ಣೂರು: ಕೊಲೆ ಪ್ರಕರಣದ ಆರೋಪಿಯ ತಂದೆಯನ್ನು ಶಾಲಾ ಬಾವಿಯಲ್ಲಿ  ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಡಿಯಾನ್‌ಮಲ, ತಟ್ಟುಕ್ಕುನ್ನು ನಿವಾಸಿ ಸೆಬಾಸ್ಟಿಯನ್ (೫೫)ನನ್ನು ಖಾಸಗಿ ಶಾಲೆಯ ಬಾವಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿರುವುದು. ದೇಹದ ಅರ್ಧಭಾಗ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಮೋಟಾರ್ ಪಂಪ್‌ನ ಹಗ್ಗದಲ್ಲಿ ನೇಣು ಬಿಗಿದಿದ್ದಾರೆ. ಮೃತದೇಹಕ್ಕೆ ಮೂರು ದಿನದ  ಹಳಮೆಯಿದೆ ಯೆಂದು ಹೇಳಲಾಗುತ್ತಿದೆ. ಶಾಲೆ ಯಲ್ಲಿ ಇಂದು ಆರಂಭಿಸಿದ ಎನ್‌ಸಿಸಿ ಶಿಬಿರಕ್ಕಾಗಿ ನೀರು ತೆಗೆಯಲೆಂದು ತಲುಪಿದಾಗ ಮೃತದೇಹ ಪತ್ತೆಯಾಗಿದೆ.

ಈ ತಿಂಗಳ ೨೩ರಂದು ಇವರ ಪುತ್ರ ಮನು ಸೆಬಾಸ್ಟಿಯನ್ ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸೆರೆಯಾಗಿದ್ದನು. ಇದರಿಂದ ಉಂಟಾದ ಮಾನಸಿಕ ಆಘಾತ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.

You cannot copy contents of this page