ಕೊಲ್ಲಂ ನಿವಾಸಿ ಅಧ್ಯಾಪಿಕೆ ನಾಗರ್‌ಕೋವಿಲ್‌ನಲ್ಲಿ ನೇಣು ಬಿಗಿದು ಸಾವು

ಚೆನ್ನೈ: ಕೊಲ್ಲಂ ನಿವಾಸಿಯಾದ ಕಾಲೇಜು ಅಧ್ಯಾಪಿಕೆ ತಮಿಳುನಾಡಿನ ನಾಗರ್‌ಕೋವಿಲ್‌ನಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲ್ಲಂ ಪಿರವಂದೂರು ನಿವಾಸಿಯಾದ ಶ್ರುತಿ (25) ಮೃತ ಅಧ್ಯಾಪಿಕೆ. ಆರು ತಿಂಗಳ ಹಿಂದೆ ತಮಿಳುನಾಡು ವಿದ್ಯುಚ್ಚಕ್ತಿ ಮಂಡಳಿಯ ನೌಕರನಾದ ಕಾರ್ತಿಕ್ ಎಂಬಾತನೊಂದಿಗೆ ಶ್ರುತಿಯ ಮದುವೆ ನಡೆದಿತ್ತು. ಪತಿಯ ಮನೆಯಲ್ಲಿ ಈಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.  ವರದಕ್ಷಿಣೆ ಕಿರುಕುಳವೇ ಶ್ರುತಿಯ ಸಾವಿಗೆ ಕಾರಣವೆಂಬ ಆರೋಪವೂ ಇದೇ ವೇಳೆ ಕೇಳಿ ಬಂದಿದೆ.

ಮದುವೆ ವೇಳೆ ೧೦ ಲಕ್ಷ ರೂಪಾಯಿ ಹಾಗೂ ೫೦ ಪವನ್ ಚಿನ್ನಾಭರಣವನ್ನು ಶ್ರುತಿಯ ಮನೆಯವರು ಕಾರ್ತಿಕ್‌ಗೆ ಕೊಡುಗೆಯಾಗಿ ನೀಡಿದ್ದರೆನ್ನಲಾಗಿದೆ. ಆದರೆ ವರದಕ್ಷಿಣೆ ಕಡಿಮೆಯಾಯಿತೆಂದು ತಿಳಿಸಿ  ಶ್ರುತಿಗೆ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದುದಾಗಿ ದೂರಲಾಗಿದೆ. ಈ ಬಗ್ಗೆ ಶ್ರುತಿಯ ಶಬ್ದ ಸಂದೇಶದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page