ಕೊಲ್ಲಂನಲ್ಲೊಂದು ಪಾಕಿಸ್ತಾನ್ ಮುಕ್ಕ್ ಹೆಸರು ಬದಲಿಸಿದ ಪಂಚಾಯತ್

ಕೊಲ್ಲಂ: ಪಹಲ್ಗಾಮ್ ಉಗ್ರವಾದಿ ಆಕ್ರಮಣದ ಬೆನ್ನಲ್ಲೇ ಸ್ಥಳೀಯರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ  ಕೊಲ್ಲಂ ಕುನ್ನತ್ತೂರು ಪಂಚಾಯತ್‌ನ ಪಾಕಿಸ್ತಾನ್ ಮುಕ್ಕ್ ಎಂಬ ಸ್ಥಳದ ಹೆಸರನ್ನು ಬದಲಿಸಲಾಗಿದೆ. ಈ ಪ್ರದೇಶಕ್ಕೆ ಐವರ್‌ಕಾಲ ಎಂಬ ಹೆಸರು  ನೀಡಲು ಪಂಚಾಯತ್ ಆಡಳಿತ ಸಮಿತಿ ಒಮ್ಮತದಿಂದ ತೀರ್ಮಾನಿಸಿದೆ. ಇತಿಹಾಸಕ್ಕೆ ಸಂಬಂಧಿಸಿ ಈ ಸ್ಥಳಕ್ಕೆ ಸೂಕ್ತವಾದ ಹೆಸರಾಗಿದೆ ಐವರ್ ಕಾಲ. ಆದರೆ ಪಾಕಿಸ್ತಾನ್ ಮುಕ್ಕ್ ಹೆಸರು ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲವೆಂದು ಪಂಚಾಯತ್ ಆಡಳಿತ ಸಮಿತಿ ತಿಳಿಸಿದೆ. ಈ  ಪಂಚಾಯತ್‌ನ ನಿಲಕ್ಕಲ್ ವಾರ್ಡ್‌ನಲ್ಲಿ ಪಾಕಿಸ್ತಾನ್ ಮುಕ್ಕ್ ಎಂಬ ಹೆಸರಿದೆ. ಸಿಪಿಎಂ ಈ ಪಂಚಾಯತ್ ಆಡಳಿತ ನಡೆಸುತ್ತಿದೆ. ಉಗ್ರಗಾಮಿಗಳ ಆಕ್ರಮಣದ ಬಳಿಕ  ದೇಶದಲ್ಲಿ ಉಂಟಾದ ಭಾವನೆಯನ್ನು ಗಣನೆಗೆ ತೆಗೆದು ಈ ಕ್ರಮ ಕೈಗೊಂಡಿರುವುದಾಗಿ ಪಂ. ಉಪಾಧ್ಯಕ್ಷ ಬಿನೇಶ್ ಕಡಂಬನಾಡ್ ತಿಳಿಸಿದ್ದಾರೆ.

ಪಾಕಿಸ್ತಾನ್ ಮುಕ್ಕ್ ಎಂಬ ಹೆಸರನ್ನು ಬದಲಿಸಬೇಕೆಂದು ಬಿಜೆಪಿ ವಾರ್ಡ್ ಪ್ರತಿನಿಧಿ ಕೆ.ಟಿ. ಅನೀಷ್ಯ ಪಂಚಾಯತ್ ಕಾರ್ಯದರ್ಶಿಗೆ ಮನವಿ ನೀಡಿದ್ದರು. ಬಳಿಕ ಆಡಳಿತ ಸಮಿತಿಯ 17 ಸದಸ್ಯರು ಕೂಡಾ ಇದನ್ನು ಬೆಂಬಲಿಸಿದರು.

You cannot copy contents of this page