ಕೋಟೆಕಾರು ಬ್ಯಾಂಕ್ ದರೋಡೆ : ಹೇಳಿಕೆ ದಾಖಲು ಮಧ್ಯೆ ಆರೋಪಿ ಆಕ್ರಮಿಸಿ ಪರಾರಿ ಯತ್ನ; ಗುಂಡು ಹಾರಿಸಿ ಸದೆಬಡಿದ ಪೊಲೀಸರು

ತಲಪ್ಪಾಡಿ: ಉಳ್ಳಾಲ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಹೇಳಿಕೆ ದಾಖಲಿಸಲು ಕರೆತಂದಾಗ ಬಿಯರ್ ಬಾಟಲಿ ಮುರಿದು ಪೊಲೀಸರಿಗೆ ಆಕ್ರಮಿಸಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಆರೋಪಿಯನ್ನು ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ. ಕಾಲಿಗೆ ಗಾಯಗೊಂಡ ಆರೋಪಿಯನ್ನು ಹಾಗೂ ಗಾಯ ಗೊಂಡ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಸಿಬ್ಬಂದಿಗಳಾದ ನಿತಿನ್, ಅಂಜನಪ್ಪ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ನಾಲ್ಕೂವರೆ ಗಂಟೆಗೆ ಘಟನೆ ನಡೆದಿದೆ. ಕಳವು ನಡೆಸಿದ ಉಳ್ಳಾಲ ಕೋಟೆಕ್ಕಾರ್ ಬ್ಯಾಂಕ್ ಪರಿಸರಕ್ಕೆ ಆರೋಪಿಗಳನ್ನು ಕರೆತಂದು ಹೇಳಿಕೆ ದಾಖಲಿಸುತ್ತಿರುವ ಮಧ್ಯೆ ಆರೋಪಿ ಆಕ್ರಮಿಸಿದ್ದಾನೆ.

ಮುಂಬೈಯಲ್ಲಿ ವಾಸಿಸುತ್ತಿರುವ ಕಣ್ಣನ್‌ಮಣಿ (36) ಎಂಬ ಆರೋಪಿ ಬಿಯರ್ ಬಾಟಲಿಯಿಂದ ಪೊಲೀಸರಿಗೆ ಆಕ್ರಮಿಸಿ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಆತನ ಕಾಲಿಗೆ  ಗುಂಡು ಹೊಡೆಯಲಾಗಿದೆ.

ಈ ತಿಂಗಳ 17ರಂದು ಮಧ್ಯಾಹ್ನ ಬ್ಯಾಂಕ್‌ನಲ್ಲಿ ಕೋವಿ ತೋರಿಸಿ ಆರು ಮಂದಿಯ ತಂಡ ಕೋಟ್ಯಂತರ ರೂ.ಗಳ ನಗ ಹಾಗೂ ನಗದನ್ನು ಕಳವುಗೈದಿತ್ತು. ಈ ಬಗ್ಗೆ ಸಿಸಿ ಟಿವಿಯಲ್ಲಿ ದಾಖಲಾದ ದೃಶಗಳ ಆಧಾರದಲ್ಲಿ ಕಳ್ಳರನ್ನು ಹುಡುಕಾಡಿ ಸೆರೆ ಹಿಡಿಯಲಾಗಿತ್ತು.

ತಮಿಳುನಾಡು ಪೊಲೀಸರ ಸಹಾಯದೊಂದಿಗೆ ತಿರುನಲ್ವೇಲಿ ಪದ್ಮನೇರಿಯ ಮುರುಗಾಂಡಿ ತೇವರೆ ಎಂಬಾತನನ್ನು ಹುಡುಕಾಡಿ ಪೊಲೀಸರು ಅಲ್ಲಿಗೆ ತಲುಪಿದ್ದು, ಬಳಿಕ ಆತನನ್ನು ಸೆರೆ ಹಿಡಿದಿದ್ದರು. ಈ ಪ್ರಕರಣದಲ್ಲಿ ಈಗ ಮೂರು ಮಂದಿ ಸೆರೆಯಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

RELATED NEWS

You cannot copy contents of this page