ಕೋಳಿ ಅಂಕ: ನಾಲ್ಕು ಮಂದಿ ವಿರುದ್ಧ ಕೇಸು; ನಾಲ್ಕು ಕೋಳಿಗಳ ವಶ
ಮುಳ್ಳೇರಿಯ: ನಾಟೆಕಲ್ಲು ಬಳಿಯ ಪೊಸೊಳಿಗೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಆದೂರು ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಲ್ಲದೆ ನಾಲ್ಕು ಕೋಳಿ ಹಾಗೂ 1920 ರೂ. ವಶಪಡಿಸಲಾಗಿದೆ.
ರಾಧಾಕೃಷ್ಣ, ಅಜಿತ್ ಕುಮಾರ್, ಸಂತೋಷ್ ಕುಮಾರ್, ಮುದ್ದ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇತರ ಹಲವರು ಓಡಿ ಪರಾರಿಯಾಗಿದ್ದಾರೆ. ವಶಪಡಿಸಿದ ಕೋಳಿಗಳನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಹರಾಜು ನಡೆಸಲಾಯಿತು. 1450, 2150, 1600, 1600ರೂ. ಎಂಬೀ ರೀತಿಯಲ್ಲಿ ನಾಲ್ಕು ಕೋಳಿಗಳು ಹರಾಜಿನಲ್ಲಿ ಮಾರಾಟವಾದವು.