ಕೋಳಿ ತ್ಯಾಜ್ಯ ಸಂಸ್ಕರಣಾ ಸ್ಥಾವರದಲ್ಲಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಸ್ಥ್ಥಿತಿಯಲ್ಲಿ ಪತ್ತೆ
ಮಲಪ್ಪುರಂ: ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮಲಪ್ಪುರಂ ಅರಿಕೋಡಿನಲ್ಲಿ ರುವ ಈರಂಜಾಟಿರಿ ವಡಕುಂ ಮುರಿಯ ಅನುಗ್ರಹ ಹಾರ್ಚರಿ ಪೂಲ್ಟ್ರೀ ಫಾರ್ಮ್ ಆಂಡ್ ರೆಂಡರಿಂಗ್ ಘಟಕದ ಅನೈರೋಬಿಕ್ ಟ್ಯಾಂಕ್‌ನಲ್ಲಿ ನಿನ್ನೆ ಈ ಮೂವರು ವಲಸೆ ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಅಸ್ಸಾಂ ಗೋಲ್‌ಪಾರ್ ನಿವಾಸಿಗಳಾದ ಹಿತೇಶ್ ಶರಣಿಯಾ (46), ಸಮದ್ ಅಲಿ (20) ಮತ್ತು ಬಿಹಾರ ಸೀತಾಮಾಡಿ ನಿವಾಸಿ ವಿಕಾಸ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಪ್ರಾಣವಾಯುವಾದ ಆಮ್ಲಜನಕದ ಕೊರತೆ ಇರುವ ಅನೈರೋಟಿಕ್ಸ್ ಟ್ಯಾಂಕ್‌ನೊಳಗೆ ಈ ಮೂವರು ಕಾರ್ಮಿಕರು ಇಳಿದ ವೇಳೆ ಆಮ್ಲಜನಕದ ಕೊರತೆಯಿಂ ದಾಗಿ ಅವರು ಉಸಿರುಗಟ್ಟಿ ಸಾವನ್ನಪ್ಪಿರ ಬಹುದೆಂದು ಶಂಕಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ಥಾವರದ ಪರಿಸರ ಭಾರೀ ದುರ್ಗಂಧದಿಂದ ಕೂಡಿದ್ದು ಆ ಬಗ್ಗೆ ಪರಿಸರ ವಾಸಿಗಳು ದೂರು ನೀಡಿದ್ದರು. ಆಗ ಈ ಮೂವರು ಕಾರ್ಮಿಕರು ಶುಚೀಕರಿಸಲೆಂದು ನಿನ್ನೆ ಬೆಳಿಗ್ಗೆ ಆ ಟ್ಯಾಂಕ್‌ನೊಳಗೆ ಇಳಿದಿದ್ದರು. ತಡವಾದರೂ ಅವರು ಹೊರಬಾರದಿದ್ದಾಗ ಘಟಕದ ಮೆನೇಜರ್ ಫೋನ್ ಮಾಡಿದರೂ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಲಭಿಸಲಿಲ್ಲ. ಅದರಿಂದಾಗಿ ಶಂಕೆಗೊಂಡ ಮೆನೇಜರ್ ಟ್ಯಾಂಕ್‌ನೊಳಗೆ ನೋಡಿದಾಗ ಅದರಲ್ಲಿ ಈ ಮೂವರು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಹೊರತೆಗೆದು ಮಂಜೇರಿ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರೊಳಗೆ ಆ ಮೂವರ ಪ್ರಾಣ ಪಕ್ಷಿಹಾರಿಹೋಗಿತ್ತು.