ಕೋಳಿ ತ್ಯಾಜ್ಯ ಸಾಗಿಸುತ್ತಿದ್ದ ವಾಹನ ವಶ

ಬದಿಯಡ್ಕ: ಕೋಳಿ ತ್ಯಾಜ್ಯಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪಂಚಾಯತ್ ಅಧಿಕಾರಿಗಳು ನಿನ್ನೆ ಸಂಜೆ ಚರ್ಲಡ್ಕದಿಂದ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕ ಮಾನ್ಯ ಉಳ್ಳೋಡಿ ಕಾರ್ಮಾರ್‌ನ ಅಭಿಷೇಕ್ (೨೩) ಎಂಬಾತನನ್ನು ಪಂಚಾಯತ್ ಸೆಕ್ರೆಟರಿ ಸಿ. ರಾಜೇಂದ್ರನ್, ಅಸಿಸ್ಟೆಂಟ್ ಸೆಕ್ರೆಟರಿ ವಿಜಯನ್, ಎನ್. ಶರತ್ ಎಂಬಿವರು ಸೇರಿ ಸೆರೆ ಹಿಡಿದರು. ವಾಹನವನ್ನು ಕಸ್ಟಡಿಗೆ ತೆಗೆದು ಪಂಚಾಯತ್ ಕಚೇರಿ ಬಳಿಗೆ ತಲುಪಿಸಲಾಗಿದೆ. ಬದಿಯಡ್ಕ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಇತ್ತೀಚೆಗಿನಿಂದ ಕೋಳಿ ತ್ಯಾಜ್ಯಗಳನ್ನು ಕೊಂಡೊಯ್ದು ಎಸೆಯುತ್ತಿರುವುದು ನಿತ್ಯ ಘಟನೆಯಾಗಿದೆ. ಇದರಿಂದ  ನಾಗರಿಕರು ಚರ್ಲಡ್ಕದಲ್ಲಿ ಕಾವಲು ನಿಂತಿದ್ದರು. ಈ ವೇಳೆ ಕೋಳಿ ತ್ಯಾಜ್ಯದೊಂದಿಗೆ ತಲುಪಿದ ವಾಹನದಿಂದ ತ್ಯಾಜ್ಯವನ್ನು ಚರ್ಲಡ್ಕದಲ್ಲಿ ಎಸೆಯಲು ಯತ್ನ ನಡೆಯುತ್ತಿದ್ದಂತೆ ನಾಗರಿಕರು ವಾಹನವನ್ನು ತಡೆದು ನಿಲ್ಲಿಸಿ ಪಂಚಾಯತ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಇದರಂತೆ ಸ್ಥಳಕ್ಕೆ ತಲುಪಿದ ಪಂಚಾಯತ್ ಅಧಿಕಾರಿಗಳು ವಾಹನವನ್ನು ವಶಪಡಿಸಿ ೫೦,೦೦೦ ರೂಪಾಯಿ ದಂಡ ವಿಧಿಸುವಂತೆ ತಿಳಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ವಾಹನವನ್ನು ಹರಾಜು ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page