ಕೋಳಿತ್ಯಾಜ್ಯ ಪ್ಲಾಂಟ್ ಸಮಸ್ಯೆಗೆ ಎರಡು ತಿಂಗಳೊಳಗೆ ಶಾಶ್ವತ ಪರಿಹಾರ- ಜಿಲ್ಲಾಧಿಕಾರಿ ಭರವಸೆ

ಸೀತಾಂಗೋಳಿ: ಅನಂತಪುರ ಕೈಗಾ ರಿಕಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೈಗಾರಿಕಾ ಕೇಂದ್ರದ ಪರಿಸರದಲ್ಲಿ ನಡೆಯುತ್ತಿರುವ ಸತ್ಯಾಗ್ರಹವನ್ನು ಇಂದು ಸಂಜೆ ತಾತ್ಕಾಲಿಕವಾಗಿ ನಿಲುಗಡೆಗೊಳಿ ಸಲಾಗುವುದು. ಕ್ರಿಯಾ ಸಮಿತಿ ಪದಾಧಿ ಕಾರಿಗಳಿಗೆ ಜಿಲ್ಲಾಧಿಕಾರಿ ನೀಡಿದ ಭರ ವಸೆಯ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲುಗಡೆ ಗೊಳಿಸಲು ನಿರ್ಧರಿಸಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಕೋಳಿತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ನಿಂದ ಉಂಟಾಗಿರುವ ಸಮಸ್ಯೆಗೆ ಎರಡು ತಿಂಗಳೊಳಗೆ ಪೂರ್ಣವಾಗಿ ಪರಿಹಾರ ಕಾಣಲಾಗುವುದೆಂದು ಜಿಲ್ಲಾಧಿಕಾರಿ ಲಿಖಿತವಾಗಿ ಭರವಸೆ ನೀಡಿರುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ. ಪ್ಲಾಂಟ್‌ನಿಂದ ಸೃಷ್ಟಿಯಾಗಿರುವ ಸಮಸ್ಯೆಗೆ ಅಲ್ಪ ಪ್ರಮಾಣದ ಪರಿಹಾರ ಇದೀಗ ಕಾಣಲಾಗಿದೆ. ಇನ್ನು ಎರಡು ತಿಂಗಳೊಳಗಾಗಿ ಶಾಶ್ವತವಾಗಿ ಪರಿಹಾರ ಕಾಣಲು ಪ್ಲಾಂಟ್‌ನ ಸಂಬಂಧಪಟ್ಟವರು ಸಿದ್ಧರಾಗದಿದ್ದಲ್ಲಿ ಪ್ಲಾಂಟ್‌ನ್ನು ಮುಚ್ಚುಗಡೆ ಗೊಳಿ ಸಲಾಗುವುದೆಂದು  ಜಿಲ್ಲಾಧಿಕಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಪ್ಲಾಂಟ್‌ನಿಂದ ಹೊರಸೂಸುವ ದುರ್ನಾತ ಹಾಗೂ ಅಲ್ಲಿಂದ ಹೊರಹರಿಯುತ್ತಿರುವ ಮಲಿನ ಜಲದಿಂದಾಗಿ ಪರಿಸರ ಪ್ರದೇಶದಲ್ಲಿ ತೀವ್ರ ಸಮಸ್ಯೆ ಎದುರಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕಳೆದ ಅಕ್ಟೋಬರ್ ೨ರಂದು ಸತ್ಯಾಗ್ರಹ ಆರಂಭಿಸಲಾಗಿತ್ತು. ಜನಪ್ರತಿನಿಧಿಗಳ ಸಹಿತ ಹಲವರು ಅಲ್ಲಿಗೆ ತಲುಪಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದರು. ಮೊನ್ನೆ ಜಿಲ್ಲಾಧಿಕಾರಿ ಕೆ. ಇಂಭಶೇಖರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದರು. ಕ್ರಿಯಾ ಸಮಿತಿಯೊಂ ದಿಗೆ ಸಮಾಲೋಚನೆ ನಡೆಸಿದ್ದರು. ಅನಂತರ ನಿನ್ನೆ ಕ್ರಿಯಾಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಯನ್ನು ಕಲೆಕ್ಟರೇಟ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಸಮಸ್ಯೆಗೆ ಸೂಕ್ತ ಪರಿಹಾರ ಕಾಣುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಕ್ರಿಯಾ ಸಮಿತಿ ಚೆಯರ್‌ಮೆನ್ ಶರೀಫ್ ಕಾಮನಬೈಲು, ಕನ್ವೀನರ್ ಸುನಿಲ್ ಕಣ್ಣೂರು, ವೈಸ್ ಚೆಯರ್‌ಮೆನ್ ಅಶ್ರಫ್ ಕಣ್ಣೂರು, ಜತೆ ಕನ್ವೀನರ್‌ಗಳಾದ ಸ್ವಾಗತ್ ಸೀತಾಂ ಗೋಳಿ, ಅವಿನಾಶ್ ಕಾರಂತ್, ವಾರ್ಡ್ ಪ್ರತಿನಿಧಿ ಜನಾರ್ದನ ಕಣ್ಣೂರು ಎಂಬಿವರು ಜಿಲ್ಲಾಧಿಕಾರಿ ಯನ್ನು ಭೇಟಿ ಮಾಡಿದ ನಿಯೋಗದಲಿ ದ್ದರು. ಪ್ಲಾಂಟ್‌ನಿಂದ ಸೃಷ್ಟಿಯಾದ ಸಮಸ್ಯೆಗೆ ಎರಡು ತಿಂಗಳೊಳಗೆ ಶಾಶ್ವತ ಪರಿಹಾರ ಕಾಣದಿದ್ದಲ್ಲಿ ಪ್ಲಾಂಟ್‌ನ ಗೇಟ್ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿಯೂ ಕ್ರಿಯಾ ಸಮಿತಿ ತಿಳಿಸಿದೆ.

You cannot copy contents of this page