ಕ್ರೈಸ್ತ ಭಗಿನಿಯರ ಜೈಲಿಗಟ್ಟಿದ ಕ್ರಮ ವಿರೋಧಿಸಿ ಎಡ ಸಂಘಟನೆಗಳಿಂದ ಪ್ರತಿಭಟನೆ

 ಮಂಜೇಶ್ವರ: ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯನ್ನು  ಬಂಧಿಸಿ ಜೈಲಿಗಟ್ಟಲಾಗಿದೆಯೆಂದು ಆರೋಪಿಸಿ  ಛತ್ತೀಸ್‌ಗಡ್ ಬಿಜೆಪಿ ಸರಕಾರದ ವಿರುದ್ಧ ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್‌ನ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ಮಂಜೇಶ್ವರ ಹೊಸಂಗಡಿ ಪೇಟೆಯಲ್ಲಿ ನಡೆಯಿತು. ಜಿಲ್ಲಾ ಸಮಿತಿ ಮಾಜಿ ಸದಸ್ಯೆ ಬೇಬಿ ಶೆಟ್ಟಿ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷೆ ಐರಿನ್ ಜೋಸ್ಫಿನ್ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಸಮಿತಿ ಕಾರ್ಯದರ್ಶಿ ಗೀತಾ ಸಾಮಾನಿ ಸ್ವಾಗತಿಸಿದರು. ವರ್ಕಾಡಿ ಪಚಾಯತ್ ಅಧ್ಯಕ್ಷೆ ಭಾರತಿ ಎಸ್, ಮಂಜೇಶ್ವರ ಪಾಲೋಟಿನ್ ಕಾನ್ವೆಂಟ್‌ನ ಧರ್ಮ ಭಗಿನಿ ಆಂಟನಿ ಮೇರಿ ಮಾತನಾಡಿದರು.

ವರ್ಕಾಡಿ:  ಡಿವೈಎಫ್‌ಐ ನೇತೃತ್ವದಲ್ಲಿ ಯುವಜನ  ಪ್ರತಿಭಟನೆ ವರ್ಕಾಡಿ ಮಜೀರ್ಪಳ್ಳದಲ್ಲಿ ಜರಗಿತು. ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದ್ದರು. ಉದಯ ಸಿ.ಎಚ್, ನವೀನ್ ಕುಮಾರ್ ಟಿ, ಭಾರತಿ ಎಸ್, ಗೀತಾ ಸಾಮಾನಿ, ಅಕ್ಷಯ್ ಕುಮಾರ್, ಕೆ.ವಿ. ರೋಷನ್, ವಿನಯ ಕುಮಾರ್ ಮಾತ ನಾಡಿದರು.

RELATED NEWS

You cannot copy contents of this page