ಕ್ವಾರ್ಟರ್ಸ್ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ಪೊವ್ವಲ್ ಬೆಂಚ್ ಕೋರ್ಟ್‌ನ ಕ್ವಾರ್ಟರ್ಸ್ ವೊಂದರ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ಸ್ಥಿತಿಯಲ್ಲಿ ಆದೂರು ಪೊಲೀಸರು ಪತ್ತೆಹಚ್ಚಿದ್ದಾರೆ.

ಸಸಿ ಆಳೆತ್ತರಕ್ಕೆ ಬೆಳೆದು ನಿಂತಿದ್ದು ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ತುಂಬಿಸಿ ಬೆಳೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಸಿ ಬಾಹ್ಯವಾಗಿ ಗೋಚರಿಸದಿರಲು ಅದರ ಸುತ್ತ ನಾಲ್ಕುಗೋಡೆಗಳನ್ನು ಕಟ್ಟಲಾಗಿತ್ತು. ಆದರೆ ಅದನ್ನು ಬೆಳೆಸಿದ ವ್ಯಕ್ತಿ ಯಾರೆಂದು ಗುರುತಿಸಲು ಸಾಧ್ಯ ವಾಗಿಲ್ಲ. ಅದಕ್ಕಿರುವ ಯತ್ನ ನಡೆಸ ಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕ್ವಾರ್ಟರ್ಸ್ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿರುವ ಬಗ್ಗೆ ಆದೂರು ಪೊಲೀಸರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಗಾಂಜಾ ಸಸಿಯನ್ನು ವಶಪಡಿಸಿಕೊಂಡಿದ್ದಾರೆ.

You cannot copy contents of this page