ಕ್ಷೇತ್ರ ಪದಾಧಿಕಾರಿಗಳ ಸಭೆ ಕರೆಯಲು ನಿರ್ಧಾರ
ಕಾಸರಗೋಡು: ಜಾತ್ರೆ ಕಾಲ ಆರಂಭಗೊಂಡಿರುವುದರಿಂದ ಸುಡು ಮದ್ದು ದುರ್ಘಟನೆ ಪುನರಾವರ್ತಿ ಸದಿರಲು ಜಾಗ್ರತೆ ಪಾಲಿಸುವ ಉದ್ದೇಶದಿಂದ ಕ್ಷೇತ್ರಗಳ ಪದಾಧಿ ಕಾರಿಗಳ ಸಭೆ ಕರೆಯುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ತಿಳಿಸಿದ್ದಾರೆ. ಜಾತ್ರೆ ವೇಳೆ ಕಾನೂನು ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗುವುದು. ಅನುಮತಿಯಿಲ್ಲದೆ ಹಾಗೂ ಸರಕಾ ರದ ನಿಯಂತ್ರಣ ಗಳನ್ನು ಪಾಲಿಸದೆ ಸುಡು ಮದ್ದು ಪ್ರದಶನ ನಡೆಸಲು ಅನುಮತಿ ನೀಡು ವುದಿಲ್ಲ. ನಿಯಂತ್ರಣ ಉಲ್ಲಂಘಿ ಸುವ ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದೆಂದೂ ಎಸ್ಪಿ ತಿಳಿಸಿದ್ದಾರೆ.