ಖತ್ತರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ನೌಕಾಪಡೆ ಸಿಬ್ಬಂದಿಗಳ ಬಿಡುಗಡೆ

ನವದೆಹಲಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, ಗಲ್ಲುಶಿಕ್ಷಗೆ ಗುರಿಯಾಗಿದ್ದ ಎಂಟು ಭಾರತೀಯ ನೌಕಾಪಡೆಯ ಸಿಬ್ಬಂದಿಗಳನ್ನು ಖತ್ತಾರ್ ಬಿಡುಗಡೆ ಮಾಡಿದೆ.

ಭಾರತೀಯ ನೌಕಾಪಡೆಯ ಕ್ಯಾಪ್ಟನ್ ನವ್‌ತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ಶರ್ಮಾ, ಕ್ಯಾಪ್ಟನ್ ಸೌರಬ್ ವಸಿಷ್ಠ, ಕಮಾಂಡರ್ ಅಮಿತ್ ನಾಗ್‌ಪಾಲ್, ಕಮಾಂಡರ್ ಪೂರ್ಣೇಂದು, ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತ ಮತ್ತು ತಿರುವನಂತಪುರ ನಿವಾಸಿ  ನಾವಿಕ್ ರಾಖೇಶ್ ಗೋಪಕುಮಾರ್ ಎಂಬವರು ಬಿಡುಗಡೆಗೊಂಡ ಸಿಬ್ಬಂದಿಗಳಾಗಿದ್ದಾರೆ. ಖತ್ತಾರ್‌ನಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಂತೆ ಭಾರತೀಯ ನೌಕಾಪಡೆಯ ಎಂಟು ಸಿಬ್ಬಂದಿಗಳನ್ನು ೨೦೨೨ ಆಗಸ್ಟ್‌ನಲ್ಲಿ ಖತ್ತಾರ್ ಪೊಲೀಸರು ಬಂಧಿಸಿದ್ದರು. ಬಳಿಕ ಅವರಿಗೆ ಅಲ್ಲಿನ ನ್ಯಾಯಾಲಯ ಕಳೆದ ಅಕ್ಟೋಬರ್ ೨೬ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಹೀಗೆ ಶಿಕ್ಷೆಗೊಳಗಾದವರನ್ನು ಬಿಡುಗಡೆಗೊಳಿಸುವಂತೆ ಭಾರತ ಸರಕಾರ ಖತ್ತಾರ್ ಮೇಲೆ ನಿರಂತರ ರಾಜತಾಂತ್ರಿಕ  ಒತ್ತಡ ಹೇರುತ್ತಲೇ ಬಂದಿತ್ತು. ಆ ಬೇಡಿಕೆಯನ್ನು ಮನ್ನಿಸಿ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆಯ ಮರು ವಿಚಾರಣೆ ನಡೆಸಿ, ಕೊನೆಗೆ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಭಾರತ ಸರಕಾರ ಮತ್ತೆ ವಿನಂತಿಸಿಕೊಂಡಿತ್ತು. ಅದನ್ನು ಪರಿಗಣಿಸಿದ ಖ್ತತಾರ್ ದೇಶದ ಅಮೀರ್ ಈ ಎಂಟು ಮಂದಿಯನ್ನು ಬಿಡುಗಡೆಗೊಳಿಸಲು ಕೊನೆಗೂ ತಯಾ ರಾದರು. ಅವರ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಮಾತ್ರವಲ್ಲ ಶ್ಲಾಘಿಸುತ್ತೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

ಹೀಗೆ ಬಿಡುಗಡೆಯಾದ ಎಂಟು ಭಾರತೀಯ ನೌಕಾಪಡೆಯ ಸಿಬ್ಬಂ ದಿಗಳ ಪೈಕಿ ಏಳು ಮಂದಿ ಈಗಾಗಲೇ ಭಾರತಕ್ಕೆ ವಾಪಾಸಾಗಿದ್ದಾರೆ. ಅವರಿಗೆ ಭಾರತದಲ್ಲಿ ಭಾರೀ ಸ್ವಾಗತ ನೀಡಲಾ ಯಿತು. ಇನ್ನೋರ್ವ ಸಿಬ್ಬಂದಿ ಹಿಂತಿರು ಗಲು ಬಾಕಿ ಇದೆ. ಭಾರತಕ್ಕೆ ವಾಪಾಸ್ ಆಗಲು ನಮಗೆ ೧೮ ತಿಂಗಳು ಕಾಯಬೇಕಾಯಿತು. ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಅತ್ಯಂತ ಅಭಾರಿಯಾಗಿದ್ದೇವೆ. ಅವರಿಗೆ ಖತಾರ್ ಜೊತೆ ಉತ್ತಮ ಬಾಂಧವ್ಯವಿದ್ದು, ಅವರು ವೈಯಕ್ತಿಕವಾಗಿ ಮಧ್ಯಪ್ರವೇಶ ಮಾಡದೇ ಇರುತ್ತಿದ್ದಲ್ಲಿ, ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಬಿಡುಗಡೆಗೆ ಬಹಳಷ್ಟು ಶ್ರಮಿಸಿದ ಭಾರತ ಸರಕಾರಕ್ಕೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಭಾರತಕ್ಕೆ ಹಿಂತಿರುಗಿದ ನೌಕಾಪಡೆಯ ಅಧಿಕಾರಿ ಹೇಳಿದ್ದಾರೆ.ಖತಾರ್ ಖಾಸಗಿ ಕಂಪೆನಿ ಯೊಂದರಲ್ಲಿ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಯೋಜನೆಗಾಗಿ ಈ ಎಂಟು ಮಂದಿ ಕೆಲಸ ಮಾಡುತ್ತಿದ್ದರು. ಬೇಹುಗಾರಿಕೆ ಆರೋಪದಡಿ ೨೦೨೨ ಆಗಸ್ಟ್‌ನಲ್ಲಿ  ಖತಾರ್ ಪೊಲೀಸರು ಬಂಧಿಸಿದ್ದರು.

RELATED NEWS

You cannot copy contents of this page