ಗಲ್ಫ್‌ನಿಂದ ಊರಿಗೆ ಆಗಮಿಸಿದ ವ್ಯಕ್ತಿ ಹೃದಯಾಘಾತದಿಂದ ನಿಧನ

ಉಪ್ಪಳ: ಗಲ್ಪ್ನಿಂದ ಒಂದು ವಾರದ ಹಿಂದೆಯಷ್ಟೆ ಊರಿಗೆ ತಲು ಪಿದ ಉಪ್ಪಳ ಭಗವತೀ ಗೇಟ್ ಬಳಿಯ ನಿವಾಸಿ ಚಾಲಕ ಪ್ರಕಾಶ್ (60) ಹೃದಯಘಾತದಿಂದ ನಿಧನರಾ ದರು. ಇವರಿಗೆ ನಿನ್ನೆ ರಾತ್ರಿ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಹಲವು ವರ್ಷಗಳಿಂದ ಗಲ್ಫ್ನಲ್ಲಿ ಕಂಪೆನಿ ಯೊಂದರಲ್ಲಿ ಚಾಲ ಕರಾಗಿದ್ದರು. ಮೃತರು ಪತ್ನಿ ಸುಜಾತ, ಪುತ್ರ ಲಖನ್, ಅಳಿಯ ಪ್ರದೀಪ್ ಪಳ್ಳಿಕೆರೆ, ಸಹೋದರ, ಸಹೋದರಿ ಯರಾದ ಕೃಷ್ಣ, ದಾಮೋದರ, ರಾಣಿ ಕುಮಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಐತ್ತಪ್ಪ, ತಾಯಿ ಪದ್ಮಾವತಿ, ಪುತ್ರಿ ತೇಜಸ್ವಿನಿ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page